Govindraj: ವಿಧಾನಸೌಧದಲ್ಲಿ ಆರ್ ಸಿಬಿ ಕಾರ್ಯಕ್ರಮ ಮಾಡಲು ಒತ್ತಡ ಹೇರಿದ್ದೇ ಇವರು

Krishnaveni K
ಶುಕ್ರವಾರ, 6 ಜೂನ್ 2025 (17:00 IST)
ಬೆಂಗಳೂರು: ವಿಧಾನಸೌಧದಲ್ಲಿ ಆರ್ ಸಿಬಿ ಆಟಗಾರರಿಗೆ ಸನ್ಮಾನ ಮಾಡಲು ಒತ್ತಡ ಹೇರಿದ್ದೇ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ಮೊನ್ನೆ ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿಯದ್ದೇ ಓಡಾಟವಿತ್ತು. ಆಟಗಾರರಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಿದ್ದೂ ಕಂಡುಬಂದಿತ್ತು.

ಇದೀಗ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಗೋವಿಂದರಾಜ್ ಒತ್ತಡದ ಮೇರೆಗೇ ವಿಧಾನಸೌಧದಲ್ಲಿ ಕಾರ್ಯಕ್ರಮ ಏರ್ಪಡಿಸಲಾಯಿತು ಎಂದು ಬಾಂಬ್ ಸಿಡಿಸಿದ್ದರು. ಇದರಿಂದಾಗಿ ಪೊಲೀಸರು ರಾತ್ರಿಯಿಡೀ ನಿದ್ದೆಗೆಟ್ಟು ಭದ್ರತೆ ಒದಗಿಸಿದ್ದರು. ನಂತರ ಎರಡೂ ಕಡೆ ಭದ್ರತೆ ಒದಗಿಸಲು ಪೊಲೀಸರಿಗೆ ಕಷ್ಟವಾಯಿತು. ಇದರಿಂದಾಗಿಯೇ ಎಡವಟ್ಟಾಗಿದೆ ಎಂದು ಕುಮಾರಸ್ವಾಮಿ ದೂರಿದ್ದರು.

ಇದರ ಬೆನ್ನಲ್ಲೇ ಈಗ ಗೋವಿಂದರಾಜ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. 2023 ರಿಂದ ಗೋವಿಂದರಾಜ್ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಹಬ್ಬಕ್ಕೆ ದಿನಗಣನೆ: ಪಟಾಕಿ ದುರಂತ ತಡೆಗೆ ಪೊಲೀಸ್ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

ಒಡಿಶಾ: ಬಿಜೆಪಿ ಮುಖಂಡ ಪಿತಾಬಾಷ್ ಪಾಂಡಾ ಬರ್ಹಾಂಪುರದಲ್ಲಿ ಗುಂಡಿಕ್ಕಿ ಹತ್ಯೆ

ಬುರುಡೆ ಗ್ಯಾಂಗ್ ಜತೆಗಿನ ನಂಟಿನ ಬಗ್ಗೆ ಸುಜಾತಾ ಭಟ್ ಸ್ಫೋಟಕ ಹೇಳಿಕೆ

ಸಿಜೆಐ ಮೇಲೆ ಶೂ ಎಸೆದ ಪ್ರಕರಣ; ವಕೀಲರ ಪ್ರತಿಕ್ರಿಯೆ ಕೇಳಿದ್ರೆ ಶಾಕ್

Karnataka Weather: ಮುಂದಿನ ಎರಡು ದಿನ ಈ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ

ಮುಂದಿನ ಸುದ್ದಿ
Show comments