Publish Date: Mon, 25 Sep 2023 (16:20 IST)
Updated Date: Mon, 25 Sep 2023 (16:32 IST)
ಕಾಂಗ್ರೆಸ್ ಆಡಳಿತ ಶುರುಮಾಡಿದಾಗಿನಿಂದಲೂ ಪಕ್ಷದೊಳಗೆ ಒಂದಿಲ್ಲೊಂದು ಭಿನ್ನಮತ ಸ್ಫೋಟಿಸುತ್ತಲೆ ಇದೆ. ಇತ್ತೀಚೆಗೆ ಶಾಸಕರು, ಸಚಿವರ ನಡುವಿನ ಪತ್ರ ಸಮರ ಜೋರಾಗಿದ್ದು, ಇದನ್ನೆಲ್ಲಾ ಸರಿಪಡಿಸಲು ಖುದ್ದು ಸಿಎಂ ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದಾರೆ. ಶಾಸಕರ ಅಹವಾಲುಗಳಿಗೆ ಸ್ಪಂದಿಸಲು ಸಿದ್ದರಾಗಿರುವ ಸಿಎಂ ಸಿದ್ದರಾಮಯ್ಯ, ವಾರಕ್ಕೊಂದು ದಿನ ಶಾಸಕರ ಭೇಟಿ ಕಾರ್ಯಕ್ರಮ ರೂಪಿಸಿಕೊಂಡಿದ್ದಾರೆ. ಅದರಂತೆ ನಿನ್ನೆಯಿಂದ ಸಿಎಂ ಶಾಸಕರ ಭೇಟಿ ಕಾರ್ಯಕ್ರಮ ಆರಂಭಗೊಂಡಿದ್ದು, ಪ್ರತಿ ಶನಿವಾರದಂದು ಶಾಸಕರ ಭೇಟಿಗೆ ಸಿದ್ದರಾಮಯ್ಯ ಸಮಯ ನಿಗದಿ ಮಾಡಿದ್ದಾರೆ. ಪಕ್ಷಾತೀತವಾಗಿ ಶಾಸಕರ ಅಹವಾಲು ಬೇಡಿಕೆ ಕೇಳಲು ಸಿದ್ದರಾದ ಸಿಎಂ, ಗೃಹಕಚೇರಿ ಕೃಷ್ಣಾದಲ್ಲಿ ಶಾಸಕರ ಭೇಟಿಗೆ ಸಮಯಾವಕಾಶ ನೀಡಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 12 ರವರೆಗೆ ಭೇಟಿಗೆ ಅವಕಾಶ ನೀಡಿದ್ದಾರೆ. ಇನ್ನು, ಶನಿವಾರ ಸಾಧ್ಯವಾಗದಿದ್ರೆ ಮತ್ತೊಂದು ದಿನ ಭೇಟಿಗೂ ಅವಕಾಶ ನೀಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.