ಬೆಂಗಳೂರು: ಟಿವಿ ಮಾಧ್ಯಮಗಳು ಸಂಪೂರ್ಣ ಹಾಳಾಗಿವೆ. ನಿಮ್ಮ ಬಗ್ಗೆ ಅಣ್ಣನಿಗೆ ಬೇಸರವಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ ಬೆನ್ನಲ್ಲೇ ಇದೀಗ ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.
ಮಾಧ್ಯಮಗಳಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದೇನೆ. ಮಾಧ್ಯಮದವರನ್ನು ತೃಪ್ತಿಪಡಿಸಲು ನನ್ನ ಕೆಲಸವನ್ನೇ ಮಾಡಲು ಆಗುತ್ತಿಲ್ಲ ಎಂದಿದ್ದಾರೆ.
‘ನಾನು ನನ್ನ ಕುಟುಂಬದವರು ಕಣ್ಣೀರು ಹಾಕಿದ್ರೆ ಮೊಸಳೆ ಕಣ್ಣೀರು ಅಂತಾರೆ. ಬಡವರು, ಅಂಗವಿಕಲರನ್ನು ಕಂಡರೆ ನಮಗೆ ಸಹಜವಾಗಿಯೇ ಕಣ್ಣೀರು ಬರುತ್ತೆ. ಅದನ್ನೂ ಲೇವಡಿ ಮಾಡ್ತಾರೆ. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದ ತಂದೆಯ ಮಗ ನಾನು. ನಾನು ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಲ್ಲ’ ಎಂದು ಕಾರ್ಯಕ್ರಮವೊಂದರಲ್ಲಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.