ಬೆಂಗಳೂರು : ಜೆಡಿಎಸ್ ಶಾಸಕರ ಜೊತೆ ಹೆಚ್.ಡಿ.ಕೆ ನಡೆದುಕೊಂಡ ರೀತಿಯಲ್ಲಿ ಇದೀಗ ಸಿಎಂ ಯಡಿಯೂರಪ್ಪ ಕೂಡಾ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು. ಸಿಎಂ ಅನರ್ಹ ಶಾಸಕರ ಕ್ಷೇತ್ರಗಳಿಗಷ್ಟೇ ಪ್ರಾಮುಖ್ಯತೆ ನೀಡುತ್ತಿದ್ದು, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕರು ಸಿಎಂ ಮೇಲೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಸಿಎಂ ಅನರ್ಹರ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಸಿಎಂ ತಾರತಮ್ಯ ನೀತಿಗೆ ಬಿಜೆಪಿ ಶಾಸಕರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಅಲ್ಲದೇ ಸಿಎಂ ಸರ್ಕಾರಿ ನಿವಾಸಕ್ಕೆ ಬಂದಲ್ಲಿ ನಾವು ಚರ್ಚಿಸಬಹುದು. ಧವಳಗಿರಿ ನಿವಾಸದಲ್ಲಿ ಸಿಎಂ ಜೊತೆ ಮುಕ್ತವಾಗಿ ಚರ್ಚಿಸಲಾಗಲ್ಲ. ಆದ್ದರಿಂದ ಸಿಎಂ ಕೂಡಲೇ ಸರ್ಕಾರಿ ನಿವಾಸಕ್ಕೆ ವಾಸ್ತವ್ಯ ಬದಲಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಶಾಸಕರ ಬೇಸರದ ವಿಚಾರ ಇದೀಗ ಅಪರೇಷನ್ ಕಮಲದ ಬಿಜೆಪಿ ನಾಯಕರಿಂದ ಸಿಎಂ ಗಮನಕ್ಕೆ ಬಂದಿದೆ ಎನ್ನಲಾಗಿದೆ.