ಗೌರಿಬಿದನೂರು ನಗರಸಭೆ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ರವಿನಾರಾಯಣರೆಡ್ಡಿ , ಗೌರಿಬಿದನೂರು ನಗರದ ಹೊರವಲಯದಲ್ಲಿರುವ ನದಿ ದಡದಲ್ಲಿ ಒತ್ತುವರಿ ಮಾಡಿಕೊಂಡು ಬಡವರು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಒತ್ತುವರಿ ತೆರವಿಗೆ ಮುಂದಾದ್ರೆ ಶಾಸಕರ ಕೈಗಳನ್ನು ಕತ್ತರಿಸುತ್ತೇನೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ಈಗಾಗಲೇ ಶಿವಶಂಕರರೆಡ್ಡಿಯ ಒಂದು ಕೈ ಮುರಿದಿದ್ದೇನೆ. ನಾನು ಮನಸ್ಸು ಮಾಡಿದ್ರೆ ಅವರ ಎರಡು ಕೈಗಳನ್ನು ಕತ್ತರಿಸುತ್ತೇನೆ ಎಂದು ಅಸಂಬದ್ಧ ಹೇಳಿಕೆ ನೀಡಿದ್ದಾರೆ.