ಶಾಲಾ ಗೋಡೆ ಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರವಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾತನ್ನು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ.ಎಲ್ಲದರಲ್ಲೂ ರಾಜಕಾರಣ ಮಾಡುವಂತದ್ದು ಬಹಳ ಕೆಳ ಹಂತಕ್ಕೆ ಹೋಗ್ತಿದೆ.ಕೇಸರಿ ಬಣ್ಣ ನಮ್ಮ ಭಾರತದ ಧ್ವಜದಲ್ಲೇ ಇದೆ.ಕೇಸರಿ ಬಣ್ಣ ಕಂಡರೆ ಯಾಕೆ ಇವರಿಗೆ ಅಷ್ಟು ಅಲರ್ಜಿ.ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಾಲೆ ಮಾಡ್ತಿದ್ದೇವೆ.ಅವರು ತೊಡವಂತದ್ದೆಲ್ಲ ಕೇಸರಿ.ಅದರಲ್ಲಿ ಬೇರೆ ಯಾವುದೇ ಅರ್ಥ ಇಲ್ಲ.ವುವೇಕಾನಂದ ಅಂದರೆ ಎಲ್ಲರಿಗೂ ಜ್ಞಾನ ನೀಡುವಂತವರು.ಅದನ್ನು ಎಲ್ಲರು ಕಲಿಬೇಕಾ ವಿನಹ ರಾಜಕಾರಣ ಮಾಡೋದು ಸರಿಯಲ್ಲ ಎಂದು ವಿಧಾನಸೌದದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.