ಬೆಂಗಳೂರು : ಕೊವಿಡ್ ಕೇರ್ ಸೆಂಟರ್ ನ ಬೆಡ್ ಗಳ ವಿಚಾರಕ್ಕೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ಬಿಐಇಸಿಯ ಕೊವಿಡ್ ಕೇರ್ ಸೆಂಟರ್ ನ ಬೆಡ್ ಗಳನ್ನು ಬಾಡಿಗೆಗೆ ತಂದಿದ್ದು ಏಕೆ? ನನ್ನ ಗಮನಕ್ಕೆ ತರದೆ ಅಷ್ಟು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದೇಕೆ? 2 ತಿಂಗಳಲ್ಲಿ ಬೆಡ್ ಗಳಿಗೆ ಎಷ್ಟು ಬಾಡಿಗೆ ಕೊಡಬೇಕಾಗುತ್ತದೆ? ಆ್ಯಂಬುಲೆನ್ಸ್ ಖರೀದಿಸಲು ಹೇಳಿದ್ರೂ ಇನ್ನೂ ಏಕೆ ಖರೀದಿ ಮಾಡಿಲ್ಲ ಎಂದು ಟಾಸ್ಕ್ ಫೋರ್ಸ್ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಫುಲ್ ಗರಂ ಆಗಿದ್ದಾರೆ ಎನ್ನಲಾಗಿದೆ.
ಅಲ್ಲದೇ ಕೊವಿಡ್ ಕೇರ್ ಸೆಂಟರ್ ಬೆಡ್ ಗಳನ್ನು ಬಾಡಿಗೆ ಬದಲು ಬೆಡ್ ಗಳನ್ನು ಖರೀದಿಸಿ, ಬಳಿಕ ಅವುಗಳನ್ನು ಬೇರೆಯದಕ್ಕೆ ಬಳಸಿ. ಇನ್ನೊಮ್ಮೆ ಸಭೆ ಕರೆಯೋ ವೇಳೆಗೆ ಎಲ್ಲ ಸಮಸ್ಯೆಗಳು ಬಗೆಹರಿಯಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.