ರಾಜ್ಯದಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ವಿಚಾರವಾಗಿ ರಾಜ್ಯ ಸರ್ಕಾರ, ಬಿಬಿಎಂಪಿ ಗೆ ಸದ್ಯಕ್ಕೆ ರಿಲೀಫ್ ನೀಡಿದೆ.ವಿಚಾರಣೆ ಅ.4 ಕ್ಕೆ ಹೈಕೋರ್ಟ್ ಮುಂದೂಡಿದೆ.ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವಿಗೆ ಕೈಗೊಂಡ ಕ್ರಮ ತಿಳಿಸಬೇಕಿತ್ತು.277 ಕಟ್ಟಡ ತೆರವಿನ ಬಗ್ಗೆ ಪ್ರತಿಕ್ರಿಯೆ ಬಿಬಿಎಂಪಿ ನೀಡಬೇಕಿದೆ.ತೆರವಿಗೆ ಕಾಲಮಿತಿ ನಿಗದಿಪಡಿಸಿ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್ ಸೂಚಿಸಿತ್ತು.ಜಿಲ್ಲಾವಾರು ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೂ ಸೂಚಿಸಿತ್ತು.ಈ ಬಗ್ಗೆ ಮಾಹಿತಿ ನೀಡಬೇಕಿದ್ದ ರಾಜ್ಯ ಸರ್ಕಾರ.ಸ್ವಯಂಪ್ರೇರಿತ ಪಿಐಎಲ್ ವಿಚಾರಣೆ ಹೈಕೋರ್ಟ್ ನಡೆಸುತ್ತಿದೆ. ವಾದಮಂಡನೆಗೆ ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ ಹೈಕೋರ್ಟ್ ವಿಚಾರಣೆಯನ್ನ ಅ.4 ಕ್ಕೆ ಮುಂದೂಡಿದೆ.