Publish Date: Sun, 14 Oct 2018 (16:49 IST)
Updated Date: Sun, 14 Oct 2018 (16:50 IST)
ರಕ್ಷಣೆಯ ಕೆಲಸ ಮಾಡುವ ಹೋಮ್ ಗಾರ್ಡಗಳು ವಿಭಿನ್ನ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ಹೋಮ್ ಗಾರ್ಡ್ ಗಳಿಂದ ಸ್ವಚ್ಛತಾ ಅಭಿಯಾನ ನಡೆದಿದೆ.
ಜೇವರ್ಗಿ ಪಟ್ಟಣದ ವಿವಿಧ ಬಡಾವಣೆಗಳಿಗೆ ತೆರಳಿ ಸ್ವಚ್ಛತೆ ಮಾಡಿದ ಹೋಮ್ ಗಾರ್ಡ್ ಗಳು ಜನರ ಗಮನ ಸೆಳೆದರು.
ಸ್ವಯಂ ಪ್ರೇರಣೆಯಿಂದ ಪಟ್ಟಣದ ಸ್ವಚ್ಛತೆಗಿಳಿದ ಹೋಮ್ ಗಾರ್ಡ್ ಗಳು ಸ್ವಚ್ಛತಾ ಅಭಿಯಾನ ನಡೆಸಿದರು.
ಪ್ರತಿ ರವಿವಾರವೂ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ತೀರ್ಮಾನ ಮಾಡಿದರು.