ನಗರಸಭೆಯು ಪ್ರತಿ ವರ್ಷ ಸ್ವಚ್ಛ ಸರ್ವೇಕ್ಷಣದಲ್ಲಿ ಅತಿ ಉತ್ತಮ ಪ್ರಗತಿ ಸಾಧಿಸಿದೆ. ವಾರ್ಡ್‍ವಾರುಗಳ ಸ್ವಚ್ಛತೆ, ನಗರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಹಾಗೂ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ.
ಪ್ರಸ್ತುತ ಸಾಲಿನಲ್ಲಿ ನಗರಸಭೆಯನ್ನು ತ್ಯಾಜ್ಯ ಮುಕ್ತ ನಗರಗೊಳಿಸುವಲ್ಲಿ (ಗಾರ್ಬೇಜ್ ಫ್ರೀ ಸಿಟಿ(ಜಿಎಫ್‍ಸಿ)) ನಗರಸಭೆಯು ತಮ್ಮ ಸಹಕಾರ ಹಾಗೂ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿದ್ದು, ಮಡಿಕೇರಿ ನಗರಸಭೆಗೆ 3 ಸ್ಟಾರ್ ನಗರವೆಂದು ಘೋಷಿಸುವಲ್ಲಿ ಸಾರ್ವಜನಿಕರು ಸಲಹೆ, ಮಾರ್ಗದರ್ಶನವನ್ನು 7 ದಿನದೊಳಗೆ ನೀಡಬಹುದಾಗಿದೆ ಪೌರಾಯುಕ್ತರಾದ ರಾಮದಾಸ್ ಅವರು ಕೋರಿದ್ದಾರೆ.