Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಶದ ನಂ.1 ಕ್ಲೀನ್ ಸಿಟಿ ಇದೇ ನೋಡಿ

ದೇಶದ ನಂ.1 ಕ್ಲೀನ್ ಸಿಟಿ ಇದೇ ನೋಡಿ
ಬೆಂಗಳೂರು , ಶನಿವಾರ, 20 ನವೆಂಬರ್ 2021 (21:07 IST)
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಗರ ಕೇಂದ್ರಗಳಲ್ಲಿ ನೈರ್ಮಲ್ಯವನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಾದ ಸ್ವಚ್ಛ ಸರ್ವೇಕ್ಷಣ್ 2021ರಲ್ಲಿ ಮಧ್ಯಪ್ರದೇಶದ
ಇಂದೋರ್ ಸತತ ಐದನೇ ವರ್ಷವೂ ಭಾರತದ ಸ್ವಚ್ಛ ನಗರ ಎಂಬ ಬಿರುದನ್ನು ಉಳಿಸಿಕೊಂಡಿದೆ.  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವಚ್ಛ ನಗರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಇಂದೋರ್  ನಗರದ ನಂತರ ಸೂರತ್ ಹಾಗೂ ವಿಜಯವಾಡಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ವಚ್ಛ ನಗರಗಳಾಗಿ ಸ್ಥಾನ ಪಡೆದಿವೆ. ರಾಜ್ಯದ ಮೈಸೂರು ಜಿಲ್ಲೆಗೆ ಮತ್ತೊಮ್ಮೆ ಸ್ವಚ್ಛನಗರಿಯ ಗರಿ ಧಕ್ಕಿದೆ. ದೇಶದಲ್ಲೇ 5ನೇ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಗೆ ಸಾಂಸ್ಕೃತಿಕ ನಗರ ಪಾತ್ರವಾಗಿದೆ. ಕರ್ನಾಟಕದ 4 ನಗರ ಪಾಲಿಗೆಗಳಿಗೆ ಸ್ವಚ್ಛ ನಗರ ಪುರಸ್ಕಾರ ಸಿಕ್ಕಿದೆ. ಮೈಸೂರು, ತುಮಕೂರು, ಹುಬ್ಬಳ್ಳಿ, ಬೆಂಗಳೂರು ಪಾಲಿಕೆಗಳಿಗೆ ಗೌರವಕ್ಕೆ ಪಾತ್ರವಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸದಾಗಿ 213 ಜನರಿಗೆ ಕೊರೊನಾ ದೃಢ!