Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೋವಿಡ್-19ನಿಂದ ಡ್ರಿಂಕ್ ಆ್ಯಂಡ್ ಡ್ರೈವ್ ವಾಹನ ತಪಾಸಣೆಗೆ ಬ್ರೇಕ್ ಹಾಕಿದ್ದ ನಗರ ಸಂಚಾರ ಪೊಲೀಸರು

ಕೋವಿಡ್-19ನಿಂದ ಡ್ರಿಂಕ್ ಆ್ಯಂಡ್ ಡ್ರೈವ್ ವಾಹನ ತಪಾಸಣೆಗೆ ಬ್ರೇಕ್ ಹಾಕಿದ್ದ ನಗರ ಸಂಚಾರ ಪೊಲೀಸರು
bangalore , ಶನಿವಾರ, 25 ಸೆಪ್ಟಂಬರ್ 2021 (22:16 IST)
ಕೋವಿಡ್-19ನಿಂದ ಡ್ರಿಂಕ್ ಆ್ಯಂಡ್ ಡ್ರೈವ್ ವಾಹನ ತಪಾಸಣೆಗೆ ಬ್ರೇಕ್ ಹಾಕಿದ್ದ ನಗರ ಸಂಚಾರ ಪೆÇಲೀಸರು, ಶನಿವಾರದಿಂದಲೇ ನಗರದೆಲ್ಲೆಡೆ `ಆಲ್ಕೋ ಮೀಟರ್' ಮೂಲಕ ತಪಾಸಣೆ ಆರಂಭಿಸಿದ್ದಾರೆ. 
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಸಂಚಾರ ಪೆÇಲೀಸ್ ವಿಭಾಗದ ಜಂಟಿ ಪೆÇಲೀಸ್ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ, ``2020ರ ಮಾರ್ಚ್ ಕೊನೆಯ ವಾರದಿಂದ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ನಿಲ್ಲಿಸಲಾಗಿತ್ತು. ಆದರೆ, ವಾಹನ ಸವಾರರು ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಾರೆ ಎಂಬ ಆರೋಪವಿತ್ತು. ಇದರಿಂದಾಗಿಯೇ ನಗರದಲ್ಲಿ ಸರಣಿ ಅಪಘಾತಗಳಾಗುತ್ತಿವೆ ಎಂಬ ಆರೋಪವು ಕೇಳಿ ಬಂದಿತ್ತು,'' ಎಂದರು. 
``ದೇಶದ ಬೇರೆ ಬೇರೆ ಮಹಾನಗರಗಳಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಆರಂಭವಾಗಿದೆ. ಹೀಗಾಗಿ ವೈದ್ಯರು, ತಜ್ಞರ ಸಲಹೆ ಪಡೆದು ಮೊದಲಿನಂತೆ ಅಲ್ಕೋ ಮೀಟರ್ ಮೂಲಕ ತಪಾಸಣೆ ನಡೆಯಲಿದೆ. ಈ ಮೂಲಕ ನಗರದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಪೆÇಲೀಸ್ ವಿಭಾಗದಲ್ಲಿರುವ 600 ಆಲ್ಕೋಮೀಟರ್‍ಗಳನ್ನು ಸಂಬಂಧಿಸಿದ ಕಂಪನಿಯವರು ಪರಿಶೀಲನೆ ನಡೆಸಿ, ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಿಸಲಾಗಿದೆ,'' ಎಂದು ಹೇಳಿದರು.
ಒಬ್ಬರಿಗೆ ಒಂದೇ ಆಲ್ಕೋಮೀಟರ್:
``ಶನಿವಾರ ರಾತ್ರಿಯಿಂದಲೇ ನಗರದ 44 ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಆಲ್ಕೋ ಮೀಟರ್‍ನಲ್ಲಿಯೇ ತಪಾಸಣೆ ಆರಂಭಿಸಿದ್ದು, ಪ್ರತಿ ಠಾಣೆಗೆ 10 ಆಲ್ಕೋ ಮೀಟರ್ ನೀಡಲಾಗಿದೆ. ಅವುಗಳನ್ನು ಜಿಪ್ ಲಾಕ್ ಕವರ್‍ನಲ್ಲಿಡಲಾಗಿದೆ. ಒಮ್ಮೆ ಒಬ್ಬರಿಗೆ ಉಪಯೋಗಿಸಿದ ಯಂತ್ರವನ್ನು ಬೇರೆ ಯಾರಿಗೂ ಬಳಸುವುದಿಲ್ಲ. ಬಳಿಕ ಮತ್ತೆ ಅವುಗಳನ್ನು 48 ಗಂಟೆಗಳ ಕಾಲ ಜಿಪ್ ಲಾಕ್ ಕವರ್‍ನಲ್ಲಿ ಪ್ರತ್ಯೇಕಿಸಲಾಗುತ್ತದೆ. ನಂತರ ಸ್ಯಾನಿಟೈಸರ್ ಮಾಡಲಾಗುತ್ತದೆ," ಎಂದು ಹೇಳಿದರು.
``ಮೊದಲಿಗೆ ವಾಹನ ಸವಾರನ ಬಳಿ ಮೌಖಿಕವಾಗಿ ಮದ್ಯಪಾನ ಮಾಡಿರುವ ಬಗ್ಗೆ ಪರಿಶೀಲಿಸಲಾಗುತ್ತದೆ. ಅನುಮಾನ ಬಂದ ಬಳಿಕ ಆಲ್ಕೋಮೀಟರ್ ಮೂಲಕ ತಪಾಸಣೆ ನಡೆಸಲಾಗುತ್ತದೆ. ತಪಾಸಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಸಂಚಾರ ಪೆÇಲೀಸರು ಕೂಡ ಸ್ಥಳದಲ್ಲೇ ಸ್ಯಾನಿಟೈಸರ್ ಬಳಕೆ, ಹ್ಯಾಂಡ್‍ಗ್ಲೌಸ್, ಮಾಸ್ಕ್, ಫೇಸ್‍ಶೀಲ್ಡ್ ಬಳಸುವುದು ಕಡ್ಡಾಯ. ಜತೆಗೆ ಪ್ರತಿಬಾರಿಯೂ ತಪಾಸಣೆ ನಡೆಸಿದ ನಂತರ ಹ್ಯಾಂಡ್ ಸ್ಯಾನಿಟೈಸರ್ ಮಾಡಲಾಗುತ್ತದೆ. ಇದರೊಂದಿಗೆ ಕುಡಿದು ಅನುಮಾನ ಬಂದ ವಾಹನ ಚಾಲಕ ಅಥವಾ ಸವಾರರ ವಿಡಿಯೋ ಕೂಡ ಮಾಡಲು ಅಧಿಕಾರಿ-ಸಿಬ್ಬಂದಿಗೆ ಸೂಚಿಸಲಾಗಿದೆ,'' ಎಂದರು.
ವೈದ್ಯಕೀಯ ಪರೀಕ್ಷೆ:
``ಒಂದು ವೇಳೆ ಚಾಲಕ ಅಥವಾ ಸವಾರ ಆಲ್ಕೋಮೀಟರ್‍ನಲ್ಲಿ ತಪಾಸಣೆಗೆ ಒಳಗಾಗಲು ಇಚ್ಛಿಸದಿದ್ದರೆ, ವೈದ್ಯಕೀಯ ಪರೀಕ್ಷೆಗೊಳಪಡಬೇಕಾಗುತ್ತದೆ. ಅದಕ್ಕೂ ನಿರಾಕರಿಸಿದರೆ, ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಜತೆಗೆ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ರೌಡಿಪಟ್ಟಿ ತೆರೆಯಲಾಗುತ್ತದೆ,'' ಎಂದು ಎಚ್ಚರಿಕೆ ನೀಡಿದ ಅವರು, ``ವಾಹನ ಸವಾರರು ಸಂಚಾರ ಪೆÇಲೀಸರ ಜತೆ ಸಹಕಾರ ನೀಡಬೇಕು,'' ಎಂದು ವೇಳೆ ಮನವಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿ ಹೋಗುವಂತಿಲ್ಲ