Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಿಕ್ಕಮಗಳೂರು ಹಬ್ಬ ಜನರಲ್ಲಿ ಉತ್ಸಾಹ ತುಂಬಲಿದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಚಿಕ್ಕಮಗಳೂರು ಹಬ್ಬ ಜನರಲ್ಲಿ ಉತ್ಸಾಹ ತುಂಬಲಿದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಚಿಕ್ಕಮಗಳೂರು , ಬುಧವಾರ, 18 ಜನವರಿ 2023 (21:03 IST)
ಚಿಕ್ಕಮಗಳೂರು  ವೈವಿಧ್ಯತೆ ಮತ್ತು ನಿಸರ್ಗದಿಂದ ಕೂಡಿರುವ ನಾಡು. ದೊಡ್ಡ ಪ್ರಮಾಣದಲ್ಲಿ ಚಿಕ್ಕಮಗಳೂರು ಹಬ್ಬ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು, ಚಿಕ್ಕಮಗಳೂರಿನ ಜನರಲ್ಲಿ ಉತ್ಸಾಹ ತುಂಬುವ  ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾಂಗ್ರೆಸ್ ಘೋಷಣೆ ಪ್ರತಿಯಾಗಿ ಪ್ರತಿಯಾಗಿ ಕಂದಾಯ ಸಚಿವರು ಬಿಪಿಎಲ್ ಕುಟುಂಬಕ್ಕೆ 2 ಸಾವಿರ ಕುಟುಂಬಕ್ಕೆ ನೀಡುವ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಗೃಹಿಣಿ ಶಕ್ತಿ ಎಂಬ ಯೋಜನೆ ಎಲ್ಲ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಬಡಕುಟುಂಬಗಳಿಗೆ ದಿನಿನಿತ್ಯದ ವಸ್ತುಗಳ ಖರೀದಿಗೆ  ಸೇರಿದಂತೆ ಜನರ ನೆಮ್ಮದಿಯ ಬದುಕಿಗೆ ಅನುಕೂಲವಾಗುವಂತ ಹಲವು ಯೋಜನೆಗಳನ್ನು ಜಾರಿಗೆ ತರುವ ಚಿಂತನೆ ಇದೆ. ಅಸ್ಸಾಂ ರಾಜ್ಯದಲ್ಲಿಯೇ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಮೀಸಲಾತಿ ಬಗ್ಗೆ ಅಂತಿಮ ತೀರ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ಸಚಿವ ಸಂಪುಟದ ಮುಂದೆ ಇಡಲಾಗಿದೆ. ಅಂತಿಮ ವರದಿ ಬಂದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ. ಹಿಂದುಳಿದ ವರ್ಗಗಳ ವರ್ಗೀಕರಣ, ಯಾವ ವರ್ಗಕ್ಕೆ ಎಷ್ಟು ಪ್ರಮಾಣ ಇರಬೇಕು ಎಂಬ ಬಗ್ಗೆ ಅಂತಿಮ ವರದಿ ಬಂದ ನಂತರ ಸ್ಪಷ್ಟ ಉತ್ತರ ದೊರೆಯಲಿದೆ ಎಂದರು.
 
ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ರೀತಿಯ ಹೇಳಿಕೆ ಏಕೆ ನೀಡಿದ್ದಾರೋ ಗೊತ್ತಿಲ್ಲ. ಇವರ ಹೇಳಿಕೆ ಬಗ್ಗೆ ಟೀಕೆ ಮಾಡುವುದಿಲ್ಲ.2007 ರಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಬಂದು, ಈ17 ಜನ ಮಾಡಿದಂತೆಯೇ ಚುನಾವಣೆಯನ್ನು ಎದುರಿಸಿದ್ದರು. ಹರಿಪ್ರಸಾದ್ ಅವರ ಹೇಳಿಕೆ ಈ 17 ಜನ ಶಾಸಕರಿಗೆ ಅನ್ವಯಿಸಿದರೆ, ಖುದ್ದು ಅವರಿಗೂ ಅನ್ವಯಿಸುವುದಿಲ್ಲವೇ ಎಂಬುದನ್ನು ಅವರು ಯೋಚಿಸಬೇಕು ಎಂದರು.
 
ಸ್ವಚ್ಛ ಆಡಳಿತವಿರುವ ಸರ್ಕಾರದ ವಿರುದ್ಧ ಪಕ್ಷದವರೇ ಯತ್ನಾಳ್ ಆರೋಪ ಮಾಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರೆಲ್ಲ ಅತ್ಯುತ್ಸಾಹದ ಮಿತ್ರರು. ಪಕ್ಷದ ವರಿಷ್ಟರು ಇವರೊಂದಿಗೆ ಮಾತನಾಡಿ ಬಗೆಹರಿಸಲಿದ್ದಾರೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದಲಿತರ ನಡೆ, ಕಾಂಗ್ರೆಸ್ ಕಡೆ ದಲಿತ ಸಮುದಾಯ ಜಾಗೃತಿ ಅಭಿಯಾನ-ಆರ್.ಧರ್ಮಸೇನ