Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಷಷ್ಠಿಗೆ ಕೋಳಿ ಬಲಿ: ಯಾಕೆ ಗೊತ್ತಾ?

ಷಷ್ಠಿಗೆ ಕೋಳಿ ಬಲಿ: ಯಾಕೆ ಗೊತ್ತಾ?
ಚಾಮರಾಜನಗರ , ಶುಕ್ರವಾರ, 14 ಡಿಸೆಂಬರ್ 2018 (18:19 IST)
ಷಷ್ಠಿ ಬಂದರೆ ಹಾಲು, ಬೆಣ್ಣೆ, ಪಂಚಾಮೃತ  ಹುತ್ತಕ್ಕೆ ಎರೆಯುವುದು ಸಾಮಾನ್ಯ. ಆದರೆ  ಈ ಗ್ರಾಮದಲ್ಲಿ ಕೋಳಿಯ ರಕ್ತ  ಹಾಗೂ ಮೊಟ್ಟೆ ಎರೆಯುವ  ಮೂಲಕ ಷಷ್ಠಿ ಆಚರಿಸಲಾಯಿತು.

 ಚಾಮರಾಜನಗರ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಡುವುದರ ಮೂಲಕ  ನಾಗಪ್ಪನಿಗೆ ನಮಿಸಿ, ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಲಾಯಿತು.
ಈ ಭಾಗದ ಗ್ರಾಮಸ್ಥರು ಬಹುತೇಕ ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ  ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಟ್ಟು, ಮೊಟ್ಟೆಯನ್ನು ನಾಗಪ್ಪನಿಗೆ ಸಮರ್ಪಿಸಿದರು.

ಇನ್ನೂ ಈ ರೀತಿ ಕೋಳಿ ಬಲಿಕೊಟ್ಟರೇ ಸರ್ಪ ಸಂಬಂಧದ ತೊಂದರೆ ಕಾಣುವುದಿಲ್ಲ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ ಎಂಬುದು ಈ ಗ್ರಾಮದಲ್ಲಿ ತಲ ತಲಾಂತರದಿಂದ ಬಂದ ನಂಬಿಕೆಯಾಗಿದೆ.

ನಾಗಪ್ಪನಿಗೆ ಕೋಳಿ ಬಲಿ ಎಂಬುದು ವಿಲಕ್ಷಣವಾಗಿ ಕಂಡರೂ, ಭಯ-ಭಕ್ತಿ ಹಾಗೂ ನಂಬಿಕೆಯಿಂದ ಗ್ರಾಮಸ್ಥರು ಷಷ್ಠಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೊಡಗು ಪ್ರಕೃತಿ ವಿಕೋಪ ಪರಿಹಾರಕ್ಕೆ ಒತ್ತಾಯ