Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಬಾಲಕಿಯೊಬ್ಬಳು 'ಈಗಿರಿ ನಂದಿನಿ ಸ್ತೋತ್ರಂ' ಪಠಿಸುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಏಪ್ರಿಲ್ 12 ರಂದು ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರನ್ನು ಭೇಟಿ ಮಾಡಿದ್ದು, ಈ ವಿಡಿಯೋವನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗುಜರಾತ್‌ನ ಪುಟ್ಟ ಬಾಲಕಿಯೊಬ್ಬಳು ಪ್ರಧಾನಿ ಮೋದಿಗೆ ʻಎಗಿರಿ ನಂದಿನಿ ಸ್ತೋತ್ರʼವನ್ನು ಪಠಿಸಿದಳು. ಇದರಿಂದ ಪ್ರಭಾವಿತರಾದ ನರೇಂದ್ರ ಮೋದಿಯವರು ಬಾಲಕಿಯನ್ನು ಸಾಕಷ್ಟು ಹೊಗಳಿದ್ದಾರೆ.