ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ‘ಇವತ್ತು ಬಂಧನದಲ್ಲಿರುವ ಡಿಕೆ ಶಿವಕುಮಾರ್ ಜೊತೆ ಕುಮಾರಸ್ವಾಮಿ ನಿಲ್ಲಲಿಲ್ಲ. ಒಂದು ವೇಳೆ ಕುಮಾರಸ್ವಾಮಿಯವರಿಗೆ ಇಂಥಾ ಕಷ್ಟ ಬಂದಿದ್ದರೆ ಡಿಕೆ ಶಿವಕುಮಾರ್ ಪೊಲೀಸ್ ಠಾಣೆ ಹತ್ತಿರವೇ ಕೂರುತ್ತಿದ್ದರು’ ಎಂದು ಹೇಳಿದ್ದಾರೆ.
ಅಲ್ಲದೇ ‘ಡಿಕೆಶಿಗೆ ಹೆಚ್ಡಿಕೆ ಮಾನಸಿಕವಾಗಿ ಧೈರ್ಯ ತುಂಬಬಹುದಿತ್ತು. ಆದರೆ ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟವನ್ನ ಬೆಂಬಲಿಸಲಿಲ್ಲ. ಅದನ್ನು ಬಿಟ್ಟು ಅಂದು ಚೆನ್ನಪಟ್ಟಣದಲ್ಲಿ ಕಾರ್ಯಕ್ರಮ ಹಾಕಿಕೊಂಡ್ರು, ಉದ್ದೇಶಪೂರ್ವಕವಾಗಿ ಚೆನ್ನಪಟ್ಟಣ ಕಾರ್ಯಕ್ರಮಕ್ಕೆ ಹೋಗಿದ್ರಾ? ಅಥವಾ ಪ್ರತಿಭಟನೆಗೆ ಹೋಗುವ ಜನರನ್ನ ತಡೆಯಲು ಕಾರ್ಯಕ್ರಮ ಮಾಡಿದ್ರಾ? ಎಂದು ಅವರು ಪ್ರಶ್ನಿಸಿದ್ದಾರೆ.