Webdunia - Bharat's app for daily news and videos

Install App

ನಾಳೆಯಿಂದ ಸಿಇಟಿ ಪರೀಕ್ಷೆ: ರಾಜ್ಯದ 486 ಪರೀಕ್ಷಾ ಕೇಂದ್ರ ಸ್ಥಾಪನೆ!

Webdunia
ಬುಧವಾರ, 15 ಜೂನ್ 2022 (16:47 IST)
ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಸೂಸೂತ್ರವಾಗಿ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ರಾಜ್ಯಾದ್ಯಂತ 486 ಕೇಂದ್ರಗಳಲ್ಲಿ ಮೂರು ದಿನಗಳ ಸಿಇಟಿ ಪರೀಕ್ಷೆ ನಡೆಯಲಿದೆ ಎಂದರು.
ನಾಳೆ ಅಂದರೆ ಜೂನ್‌ 16ರಂದು ಬೆಳಿಗ್ಗೆ 10.30ಕ್ಕೆ ಜೀವಶಾಸ್ತ್ರ ಪರೀಕ್ಷೆ, ಮಧ್ಯಾಹ್ನ 2.30ಕ್ಕೆ ಗಣಿತ, 17ರಂದು ಬೆಳಿಗ್ಗೆ 10.30ಕ್ಕೆ ಭೌತಶಾಸ್ತ್ರ, ಮಧ್ಯಾಹ್ನ 2.30ಕ್ಕೆ ರಸಾಯನ ಶಾಸ್ತ್ರ, 18ರಂದು 11.30ಕ್ಕೆ ಕನ್ನಡ ಭಾಷಾ ಪರೀಕ್ಷೆಗಳು ನಡೆಯಲಿವೆ.
ರಾಜ್ಯದ 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟಾರೆ 2,16,526  ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 87 ಪರೀಕ್ಷಾ ಕೇಂದ್ರಗಳು ಇದ್ದರೆ, ವಿವಿಧ ಜಿಲ್ಲೆಗಳಲ್ಲಿ 399 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ 6 ಕೇಂದ್ರಗಳಲ್ಲಿ ಕನ್ನಡ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾವೇರಿ ನೀರು ಹಂಚಿಕೆ ವಿವಾದ: ವಿಜಯ್‌ಗೆ ಮಹತ್ವದ ಪತ್ರ ಬರೆದ ಬಿವೈ ವಿಜಯೇಂದ್ರ

ವರುಣಾರ್ಭಟ ನಡುವೆ ಮುಂದಿನ ನಾಲ್ಕು ದಿನ ಉಡುಪಿಯಲ್ಲಿ ಹೇಗಿರಲಿದೆ ಗೊತ್ತಾ ಹವಾಮಾನ

ಪ್ರತಿಯೊಂದು ವರ್ಗವೂ ಪ್ರಧಾನಿ ಮೋದಿಯೊಂದಿಗಿದೆ ಎಂಬ ನಂಬಿಕೆ: ಪಿಯೂಷ್ ಗೋಯಲ್

ಕರಾವಳಿಯಲ್ಲಿ ಭಾರೀ ಮಳೆ, ನೇತ್ರಾವತಿ ನೀರಿನ ಮಟ್ಟ ಎಷ್ಟು ಏರಿಕೆಯಾಗಿದೆ ಗೊತ್ತಾ

ಅವಳನ್ನು ಕ್ಷಮಿಸುವ ಮೂಲಕ ಮೋದಿಯಿಂದ ಆಕೆಗೆ ಮರುಜೀವ: ಮೋದಿಗೆ ಧನ್ಯವಾದ ಸಲ್ಲಿಸಿದ ಬಾಲಕಿ ತಾಯಿ

ಮುಂದಿನ ಸುದ್ದಿ
Show comments