Publish Date: Wed, 31 Mar 2021 (11:01 IST)
Updated Date: Wed, 31 Mar 2021 (11:03 IST)
ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಸಿಡಿ ಲೇಡಿಗೆ ಇಂದು ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಇದು ಪ್ರಕರಣಕ್ಕೆ ಟ್ವಿಸ್ಟ್ ನೀಡುವ ಸಾಧ್ಯತೆಯಿದೆ.
ನಿನ್ನೆ ವಿಚಾರಣೆಗೆ ಹಾಜರಾದ ಯುವತಿ ಹಲವು ಮಾಹಿತಿಗಳನ್ನು ನೀಡಿದ್ದಳು. ಇಂದು ಆಕೆಯ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಲೈಂಗಿಕ ಕ್ರಿಯೆ ನಡೆದಿದೆಯೇ, ಎಷ್ಟು ದಿನಗಳ ಹಿಂದೆ ನಡೆದಿದೆ ಎಂಬಿತ್ಯಾದಿ ವಿಚಾರಗಳನ್ನು ಪರೀಕ್ಷೆ ಮಾಡಿ ತಿಳಿಯಲಾಗುತ್ತದೆ.
ಆಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಲು ಒಪ್ಪದೇ ಹೋದರೆ ತನಿಖೆಗೆ ತೊಂದರೆಯಾಗಲಿದೆ. ಇನ್ನೊಂದೆಡೆ, ಸಿಡಿ ಲೇಡಿ ಇಂದಿನ ವಿಚಾರಣೆಗೆ ಇನ್ನೂ ಹಾಜರಾಗಿಲ್ಲ. ಈಗಾಗಲೇ ಆಕೆಯ ತನಿಖೆಗೆ ಎಸ್ಐಟಿ ತಂಡ ಕಾದು ಕುಳಿತಿದೆ.