ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶಗಳ ಸಮೀಕ್ಷೆ ನಡೆಸಿದ ಬಳಿಕ ಕೇಂದ್ರದ ತಂತ್ರಜ್ಞರ ತಂಡ ಸಮಿಳುನಾಡಿನ ಮೆಟ್ಟೂರು ಆಣೆಕಟ್ಟಿನಲ್ಲಿ ಪರಿಶೀಲನೆ ನಡೆಸಿದ್ದಾರೆ.
ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರ ರಚಿಸಿರುವ ಉನ್ನತ ಮಟ್ಟದ ತಂತ್ರಜ್ಞರ ಸಮಿತಿ ಕೊಯಮತ್ತೂರಿನ 150 ಕಿ.ಮೀಟರ್ ದೂರದಲ್ಲಿರುವ ಮೆಟ್ಟೂರ ಜಲಾಶಯಕ್ಕೆ ಭೇಟಿ ನೀಡಿದರು. ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್,ಝಾ ನೇತೃತ್ವದ ತಂಡ, ಜಲಾಶಯದ ನೀರಿನ ಮಟ್ಟ, ಒಳಹರಿವು, ಹೊರಹರಿವು ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಿತು.
ಕರ್ನಾಟಕದಲ್ಲಿ 2 ದಿನಗಳ ಪರಿಶೀಲನೆ ಬಳೆಕ ತಮಿಳುನಾಡಿಗೆ ಆಗಮಿಸಿರುವ 12 ಸದಸ್ಯರ ತಂಡ, ತಮಿಳುನಾಡು, ಪುದುಚೇರಿ ಮತ್ತು ಕೇರಳದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ