Webdunia - Bharat's app for daily news and videos

Install App

ಸುಗಂಧದ್ರವ್ಯ ತಜ್ಞೆ ಮೋನಿಕಾ ಹತ್ಯೆ ಆರೋಪಿ ಬಂಧನ

Webdunia
ಸೋಮವಾರ, 10 ಅಕ್ಟೋಬರ್ 2016 (16:57 IST)
ಗೋವಾದ ಖ್ಯಾತ ಸುಗಂಧದ್ರವ್ಯ ತಜ್ಞೆ  ಮೋನಿಕಾ ಘುರ್ಡೆ ಹತ್ಯೆ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. 

 
ಬಂಧಿತ ಆರೋಪಿಯನ್ನು ಅಪಾರ್ಟಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಪಂಜಾಬ್‌ನ ಭತಿಂದಾ ನಿವಾಸಿ ರಾಜ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. 
 
ಛತ್ರಿ ವಿಚಾರಕ್ಕೆ ಮೋನಿಕಾ ಮತ್ತು ಸಿಂಗ್‌ಗೆ ಜಗಳವಾಗಿತ್ತು. ಈ ಗಲಾಟೆ ಬಳಿಕ ಕೆಲ ಕಳೆದುಕೊಂಡಿದ್ದ ಸಿಂಗ್‌ಗೆ ಬಳಿಕ ಮತ್ತೆಲ್ಲೂ ಕೆಲಸ ಸಿಕ್ಕಿರಲಿಲ್ಲ.ಇದೇ ಸಿಟ್ಟಲ್ಲಿ ಆತ ಮೋನಿಕಾಳನ್ನು ಕೊಲೆಗೈದಿದ್ದ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ಹೊರಬಿದ್ದಿದೆ. 
 
ಅಕ್ಟೋಬರ್ 6 ರಂದು ಗೋವಾದ ಸಂಗೊಲ್ಡಾದಲ್ಲಿರುವ ನಿವಾಸದಲ್ಲಿ ಮೋನಿಕಾ ಘುರ್ಡೆಯವರ ನಗ್ನ ಮೃತದೇಹ ಪತ್ತೆಯಾಗಿತ್ತು. ಆರೋಪಿಗಳು ಅತ್ಯಾಚಾರವೆಸಗಿ ನಂತರ ಹತ್ಯೆ ಮಾಡಿರಬಹುದು ಪೊಲೀಸರು ಶಂಕಿಸಿದ್ದರು. ಘಟನೆ ನಡೆದ ಮೂರು ದಿನಗಳ ಬಳಿಕ ಗೋವಾ, ಮಂಗಳೂರು, ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಆರೋಪಿ ಜೈಲು ಸೇರಿದ್ದಾನೆ. 
 
ವರದಿಗಳ ಪ್ರಕಾರ, ಮೋನಿಕಾ ಘುರ್ಡೆ ಹತ್ಯೆ ಬಳಿಕ ಆರೋಪಿ ಅವರ 2 ಎಟಿಎಂ ಕಾರ್ಡ್‌ ಮತ್ತು ಮೊಬೈಲ್ ಕದ್ದಿದ್ದ ಮತ್ತು ಘಟನೆ ಕದ್ದಿದ್ದ  ಘಟನೆ ನಡೆದ ಒಂದು ಗಂಟೆಯೊಳಗೆ ಅದೇ ಎಟಿಎಂ ಬಳಸಿ ಆರೋಪಿ ಹಣ ತೆಗೆಯುತ್ತಿರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದ್ದವು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ