ಚಿಪ್ಪಂದಿ ಕಳ್ಳರ ಮಾರಾಟದ ಜಾಡು ಹಿಡಿದು ಸಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸಿನಿಮಾ ರೀತಿಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನಕಪುರದ ಅನಿಲ್ ಕುಮಾರ್, ಬೆಂಗಳೂರಿನ ಇನಾಯತ್ ಬಂಧಿತ ಆರೋಪಿಗಳಾಗಿದ್ದಾರೆ. ಚಿಪ್ಪಂದಿ ಕಳ್ಳರ ಮಾರಾಟದ ಜಾಡು ಹಿಡಿದು ಸಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದರು.
ಗಿರಾಕಿಗಳ ವೇಷದಲ್ಲಿ ತೆರಳಿ ಆರೋಪಿಗಳ ಸೆರೆ ಹಿಡಿದ ಅರಣ್ಯ ಸಿಬ್ಬಂದಿ ತೋಡಿದ್ದ ಖೆಡ್ಡಕ್ಕೆ ಬಂದು ಚಿಪ್ಪಂದಿ ಕಳ್ಳರು ಬಿದ್ದಿದ್ದಾರೆ.
ಮಂಡ್ಯ ಜಿಲ್ಲೆಯ ಹಲಗೂರು ಬಳಿ ಆರೋಪಿಗಳ ಬಂಧನ ಮಾಡಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರ್ ಹಾಗೂ ಜೀವಂತ ಚಿಪ್ಪಂದಿ ವಶ ಪಡಿಸಿಕೊಳ್ಳಲಾಗಿದೆ.
ಚಿಪ್ಪಂದಿಯನ್ನು ಚಿತ್ರದುರ್ಗದ ಬಳಿ ಸೆರೆ ಹಿಡಿದಿರೋದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಚಿಪ್ಪಂದಿಗಳು ಮನೆಯಲ್ಲಿದ್ದರೆ ಸಂಪತ್ತು ಹೆಚ್ಚಾಗುತ್ತೆ ಅನ್ನೋ ನಂಬಿಕೆ ಇದೆ. ಮತ್ತೊಂದೆಡೆ ಚಿಪ್ಪಂದಿ ಮಾಂಸ ಹಾಗೂ ಚಿಪ್ಪುಗಳಿಗೆ ವಿದೇಶಗಳಲ್ಲಿ ಬಹಳ ಬೇಡಿಕೆಯೂ ಇದೆ. ಚಿಪ್ಪಂದಿ ಚಿಪ್ಪುಗಳಿಂದ ಅಭರಣಗಳ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ.
ಸಂಚಾರಿ ದಳ ಡಿಸಿಎಫ್ ಪೂವಯ್ಯ ನೇತೃತ್ವದ ತಂಡದಿಂದ ನಡೆದ ಕಾರ್ಯಾಚರಣೆ ಇದಾಗಿದೆ.