ಸಾರ್ವಜನಿಕ ಮೈದಾನದ ಬಳಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಮಂಗಳೂರು ನಗರದ ಕದ್ರಿ ಸಾರ್ವಜನಿಕ ಮೈದಾನದ ಬಳಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಇಕೊನಾಮಿಕ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕೊಡಿಯಾಲ್ಬೈಲ್ನ ಶರಾಜ್, ಕದ್ರಿಯ ಚಿರಾಗ್, ಕಾರ್ಸ್ಟ್ರೀಟ್ ನಿವಾಸಿಗಳಾದ ಅನಂತ್, ಪವನ್ ಬಂಧಿತ ಆರೋಪಿಗಳು. ಗಾಂಜಾ ಸೇವನೆ ಆರೋಪದಲ್ಲಿ ಕುಶಾಲನಗರ ನಿವಾಸಿ ರೋಹನ್, ಕಾಂಜಂಗಾಡ್ ನಿವಾಸಿ ಸದಾಶಿವ ಕಾಮತ್, ಬಿಜೈ ಕಾಪಿಕಾಡು ನಿವಾಸಿ ಭದ್ರೇಶ್, ಕೊಟ್ಟಾರ ನಿವಾಸಿ ಸುನೀಲ್ ಭಟ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಿಂದ 14.900 ರೂ. ಮೌಲ್ಯದ ಸುಮಾರು 500 ಗ್ರಾಂ ತೂಕದ ಗಾಂಜಾ ಹಾಗೂ 58ಸಾವಿರ ರೂ. ಮೌಲ್ಯದ 4 ಮೊಬೈಲ್ಪೋನ್ಗಳು ಹಾಗೂ ಸುಮಾರು10 ಸಾವಿರ ರೂ. ಮೌಲ್ಯದ ಅಮಲಿನ ಮಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಹಾಗೂ ನಗದು 3800 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಸೊತ್ತುಗಳ ಮೌಲ್ಯ 1,35,700 ರೂ. ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಮೇಲಧಿಕಾರಿಗಳ ನಿರ್ದೇಶನದಂತೆ ನಾರ್ಕೋಟಿಕ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದಾರೆ.