Publish Date: Wed, 04 Dec 2019 (21:13 IST)
Updated Date: Wed, 04 Dec 2019 (21:15 IST)
ರಾಜ್ಯದ ಉಪಚುನಾವಣೆಯಲ್ಲಿ ಸರ್ಕಲ್ ಇನ್ಸಪೆಕ್ಟರ್ ಒಬ್ಬರು ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಿಕೆ ಮಾಡಿರೋ ಆರೋಪ ಕೇಳಿಬಂದಿದೆ.
ಕೆ.ಆರ್.ಪೇಟೆಯ ತೋಟದಲ್ಲಿ ಡಿಸಿಎಂ ಅಶ್ವತ್ ನಾರಾಯಣ ವಾಸ್ತವ್ಯ ಹೂಡಿದ್ದು, ಅಲ್ಲಿಂದಲೇ ಪೊಲೀಸ್ ಅಧಿಕಾರಿ ಮೂಲಕ ಹಣ ಹಂಚಲಾಗುತ್ತಿದೆ. ಹೀಗಂತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪ ಮಾಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರನ್ನು ಹೆದರಿಸಲಾಗುತ್ತಿದೆ. ಕೆ.ಆರ್.ಪೇಟೆಯಲ್ಲಿ ಒಂದು ವೋಟ್ ಗೆ ಎರಡು ಸಾವಿರ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ದೂರಿದ್ರು.