ಅಂತಾರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಹೆರಾಯಿನ್ ಖರೀದಿಸಿ ನಗರಕ್ಕೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಡ್ರಗ್ ಪೆಡ್ಲರ್‍ನನ್ನು ಕೆ.ಜಿ. ಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಮಣಿಪುರದ ಸೋರಾಯ್ ಸ್ಯಾಮ್ ಬೋರಿಸ್ ಸಿಂಗ್ (21) ಬಂಧಿತ. ಆರೋಪಿಯಿಂದ ಎರಡು ಲಕ್ಷ ಮೌಲ್ಯದ 10 ಗ್ರಾಂ ಹೆರಾಯಿನ್, ಒಂದು ಸಾವಿರ ನಗದು, ಪಾಂಡ್ಸ್ ಪೌಡರ್ ಡಬ್ಬಿಗಳು, ಐದು ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಡಬ್ಬಿಗಳು, ಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗ್, ಏರ್ ಇಂಡಿಯಾ ಬೋರ್ಡಿಂಗ್‍ನ ಮೂರು ಪಾಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದರು.
ಆರೋಪಿ ಎಚ್‍ಬಿಆರ್ ಲೇಔಟ್‍ನ ಅಮ್ಮಾಸ್ ಬೇಕರಿ ಹಿಂಭಾಗದ ರಸ್ತೆಯೊಂದರಲ್ಲಿ ಕಪ್ಪು ಬ್ಯಾಗ್ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು. ಇದನ್ನು ಗಮನಿಸಿದ ಸ್ಥಳೀಯರು ಪೆÇಲಿಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೇ ದೌಡಾಯಿಸಿದ ಪೆÇಲೀಸರು ಆರೋಪಿಯನ್ನು ಸುತ್ತುವರಿದು ಬಂಧಿಸಿದ್ದಾರೆ.
ಸಿನಿಮೀಯಾ ಶೈಲಿಯಲ್ಲಿ ಹೆರಾಯಿನ್ ಸಾಗಟ:
ತಮಿಳು ಐಯಾನ್ ಚಿತ್ರವನ್ನು ಹತ್ತಾರು ಬಾರಿ ವೀಕ್ಷಿಸಿದ ಆರೋಪಿ ಸಿನಿಮಾದಲ್ಲಿ ನಾಯಕ ಸೂರ್ಯ ಮಾದಕ ವಸ್ತು ಸಾಗಿಸುವ ರೀತಿಯಲ್ಲೇ ತಾನು ಸಾಗಿಸಬೇಕೆಂದುಕೊಂಡು ಪಾಂಡ್ಸ್ ಪೌಡರ್ ಖಾಲಿ ಡಬ್ಬಿಯಲ್ಲಿ ಹೆರಾಯಿನ್ ತುಂಬಿಕೊಂಡು ಸಾಗಿಸುತ್ತಿದ್ದ. ನೋಡಿದವರಿಗೂ ಇದು ಪಾಂಡ್ಸ್ ಪೌಡರ್ ಡಬ್ಬಿ ಎಂದು ಗೋಚರವಾಗುತ್ತಿತ್ತು.
ಆರೋಪಿ ಪೌಂಡ್ಸ್ ಪೌಡರ್ ಡಬ್ಬಿಯಲ್ಲಿ ಹೆರಾಯಿನ್ ತುಂಬಿಕೊಂಡು ಹಲವಾರು ಬಾರಿ ಮಣಿಪುರದಿಂದ ಬೆಂಗಳೂರಿಗೆ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ವಿಮಾನದ ಮೂಲಕವೇ ಬಂದು, ಇಲ್ಲಿನ ಟೆಕ್ಕಿಗಳು, ಉದ್ಯಮಿಗಳು, ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಾದಕ ವ್ಯಸನಿಗಳಿಗೆ ಮಾರಾಟ ಮಾಡಿ ತಮ್ಮೂರಿಗೆ ತೆರಳುತ್ತಿದ್ದ. ಇದರಿಂದ ಲಕ್ಷಾಂತರ ರೂ. ಗಳಿಸುತ್ತಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಪೆÇಲೀಸರು ತಿಳಿಸಿದರು. ಸದ್ಯ ಆರೋಪಿ ವಿರುದ್ಧ ಕೆ.ಜಿ. ಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.