ಬೆಂಗಳೂರು: ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ಸೂಚಿಸಿದ ಸಚಿವ ದಿನೇಶ್ ಗುಂಡೂರಾವ್‌ಗೆ ಪತಂಜಲಿ ಉತ್ಪನ್ನಗಳ ಮೇಲೆ ನಿಮಗೇಕಿಷ್ಟು ದ್ವೇಷ. ಪತಂಜಲಿ ಹಲಾಲ್ ಅಲ್ಲ ಅಂತಲೇ ಎಂದು ವಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.
ಪತಂಜಲಿ ಸಂಸ್ಥೆ ಜನರಿಗೆ ಪುರಾವೆ ಇಲ್ಲದೆಯೇ ದಾರಿತಪ್ಪಿಸುತ್ತಿದೆ. ರೋಗ ಗುಣಪಡಿಸುವ ಲಕ್ಷಣ ಇಲ್ಲದಿದ್ದರೂ ಆಯುರ್ವೇದ ಎಂದು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಪತಂಜಲಿ ಜೌಷಧದ ಗುಣಮಟ್ಟದ ಪರೀಕ್ಷೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ವಿಪಕ್ಷ ನಾಯಕ ಆರ್ ಅಶೋಕ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಹಲಾಲ್ ಕಟ್ @INCKarnataka
ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು, ಬಿಸಿನೆಸ್ ಗಳು ಬೆಳೆದರೆ ಸಹಿಸೋದೇ ಇಲ್ಲ.
ಸಮಸ್ತ ಭಾರತೀಯರ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿ ಬೆಳೆಯುತ್ತಿರುವ ಬಾಬಾ ರಾಮದೇವ್ ಅವರ ಪತಂಜಲಿ ಮೇಲೆ ಈಗ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ.
ಮಾನ್ಯ @dineshgrao
ಅವರೇ, ಪತಂಜಲಿ ಉತ್ಪನ್ನಗಳ ಮೇಲೆ ನಿಮಗೇಕಿಷ್ಟು ದ್ವೇಷ?
ಪತಂಜಲಿ ಹಲಾಲ್ ಅಲ್ಲ ಅಂತಲೇ?
ಪತಂಜಲಿ ಕೇಸರಿ ಬಟ್ಟೆ ತೊಡುವ ಯೋಗಗುರು ಶ್ರೀ ಬಾಬಾ ರಾಮ್ ದೇವ್ ಅವರದ್ದು ಅಂತಲೇ?
ಪತಂಜಲಿ ಆತ್ಮನಿರ್ಭರ ಭಾರತದ ಪ್ರತೀಕ ಅಂತಲೇ?
ಈ ದ್ವೇಷ ರಾಜಕಾರಣವೇ ಕಾಂಗ್ರೆಸ್ ಪಕ್ಷವನ್ನ ಸುಡಲಿದೆ. ಈ ನಿಮ್ಮ ಹಲಾಲ್ ಮಮಕಾರವೇ ನಿಮ್ಮನ್ನ ನಾಶ ಮಾಡಲಿದೆ.