ಬೆಂಗಳೂರು: ವೇತನ ಹೆಚ್ಚಳ ಸಂಬಂಧ ಸರ್ಕಾರ ಮುಂದಿಟ್ಟ ಮಾದರಿ ನೀತಿ ಸಂಹಿತೆ ವಿರುದ್ಧ ಸಾರಿಗೆ ನೌಕರರು ನಾಳೆಯಿಂದ ಅನಿರ್ದಾಷ್ಟವಧಿ ಬಸ್ ಮುಷ್ಕರ ನಡೆಸಲಿದ್ದಾರೆ.
ಸರ್ಕಾರದ ಜೊತೆಗಿನ ಸಂಧಾನ ವಿಫಲವಾದ ಬಳಿಕ ಬಸ್ ನೌಕರರು ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಸರ್ಕಾರ ಕೂರಾ ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಖಾಸಗಿ ಬಸ್ ಗಳನ್ನು ಬಿಡಲು ಸಿದ್ಧತೆ ನಡೆಸಿದ್ದಾರೆ.
ನೌಕರರ ಬೇಡಿಕೆ ಪೂರೈಸಲು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿದ್ದಾರೆ. ಆದರೆ ನಮ್ಮ ಬೇಡಿಕೆಗೂ ನೀತಿ ಸಂಹಿತೆಗೂ ಸಂಬಂಧವಿಲ್ಲ. ಹೀಗಾಗಿ ತಕ್ಷಣವೇ ನಮ್ಮ ಬೇಡಿಕೆ ಪೂರೈಸಿ ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮತ್ತೆ ಸಾರಿಗೆ ಮುಷ್ಕರದಿಂದಾಗಿ ಸಾಮಾನ್ಯ ಜನರು ಸಂಕಷ್ಟ ಎದುರಿಸಲಿದ್ದಾರೆ.