Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿರುವ ರಾಜ್ಯ ಬಜೆಟ್ ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ನವ ಕರ್ನಾಟಕದ ಬಗ್ಗೆ ಮಾತನಾಡುತ್ತಾರೆ. ಆದರೆ ಬಜೆಟ್ ನಲ್ಲಿ ಯಾವುದೇ ಮುಂದಾಲೋಚನೆಯಿಲ್ಲ.
ಬಜೆಟ್ ಜನರ ಕನಸು ಕಟ್ಟಿಕೊಳ್ಳುವ ರೀತಿಯಲ್ಲಿರಬೇಕು. ಬಜೆಟ್ ಜನರ ಮುನ್ನೋಟವಾಗಿ ಇರಬೇಕು. ಇಲಾಖಾವಾರು ಬಜೆಟ್ ಮಂಡಿಸಬೇಕು. ಆದರೆ ವಲಯವಾರು ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಬಗ್ಗೆ ಪಾರದರ್ಶಕತೆಯಿಲ್ಲ. ಯಾವುದಕ್ಕೆ ಎಷ್ಟು ಮೀಸಲಿಟ್ಟಿದ್ದಾರೆ ಗೊತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳು ಎಂದಿದ್ದಾರೆ. ಆದರೆ ಪಂಚಸೂತ್ರಗಳಿಗೆ ಇದು ತದ್ವಿರುದ್ಧವಾಗಿದೆ ಬಜೆಟ್ ನಲ್ಲಿ ಸಮಗ್ರ ಅರ್ಥಿಕ ಅಭಿವೃದ್ಧಿ ಕಾಣ್ತಿಲ್ಲ. ಹೊಸ ಚಿಂತನೆ, ಹೊಸ ಚೈತನ್ಯ ಕಾಣ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.