Publish Date: Tue, 01 Feb 2022 (21:11 IST)
Updated Date: Tue, 01 Feb 2022 (21:14 IST)
ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ವರ್ಷದಲ್ಲಿ 25 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.
ಜತೆಗೆ 100 ಹೊಸ ಕಾರ್ಗೋ ಟರ್ಮಿನಲ್ ಗಳ ನಿರ್ಮಾಣ, ಹೊಸ ಹಾಗೂ ಆಧುನಿಕ ಮೆಟ್ರೋ ರೈಲ್ವೆ ಸಿಸ್ಟಮ್ ಅಳವಡಿಸಲಾಗುತ್ತದೆ ಎಂದು ಘೋಷಿಸಿದರು.