Publish Date: Sat, 04 Nov 2017 (11:30 IST)
Updated Date: Sat, 04 Nov 2017 (11:32 IST)
ಬೆಂಗಳೂರು: ಖಾಸಗಿ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ವೈದ್ಯರಿಲ್ಲ, ದಾದಿಯರು ಇರಲ್ಲ. ಹೀಗಿರುವಾಗ ಅದರ ಮೇಲೆ ಕೆಲಸ ಮಾಡುವುದರ ಬದಲು ಖಾಸಗಿ ವೈದ್ಯರ ಮೇಲೆ ಗದಾಪ್ರಹಾರ ಮಾಡಲು ಸರ್ಕಾರ ಹೊರಟಿದೆ ಎಂದು ಬಿಎಸ್ ವೈ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಆರೋಗ್ಯ ಸಚಿವರು ಮುಷ್ಕರದ ಮಾಹಿತಿಯೇ ಇಲ್ಲ ಎನ್ನುತ್ತಾರೆ. ಈ ರಾಜ್ಯ ಸರ್ಕಾರ ಇಂತಹ ಹಲವು ಕೆಟ್ಟ ನಿರ್ಧಾರಗಳ ಸರಮಾಲೆಯನ್ನೇ ತೆಗೆದುಕೊಂಡಿದೆ ಎಂದು ಬಿಎಸ್ ವೈ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Sat, 04 Nov 2017 (11:30 IST)
Updated Date: Sat, 04 Nov 2017 (11:32 IST)