ಹುಬ್ಬಳ್ಳಿ : ಬಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಕುರಿತು ಟೀಕಿಸಿದ್ದು, ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯ ನಾಟಕ ಇದು ಎಂದು ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ಸೂಕ್ತ ಅನುದಾನ ಕೊಟ್ಟಿಲ್ಲ. ಅದನ್ನು ಬಿಟ್ಟು ಬರಗಾಲ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಜಿಂದಾಲ್ ಗೆ ನೀಡುತ್ತಿದ್ದ ಭೂಮಿ ವಿಚಾರದ ಬಗ್ಗೆ ಮಾತನಾಡಿದ ಅವರು, ‘ಜಿಂದಾಲ್ ಗೆ ಈಗಾಗಲೇ ಕೊಟ್ಟಿರುವ ಭೂಮಿ ಸಫಿಶಿಯಂಟ್ ಆಗಿದೆ. ಈಗ ಕೊಡುತ್ತಿರುವ ಜಮೀನಿನಲ್ಲಿ ಉತ್ತಮ ಖನಿಜಗಳಿವೆ. ಜಿಂದಾಲ್ ಗೆ ಮತ್ತೆ ಜಮೀನು ಕೊಡುವ ಅವಶ್ಯಕತೆಯಿಲ್ಲ. ಬೇರೆ ಇಂಡಸ್ಟ್ರೀಸ್ ಗೆ ಪ್ರೋತ್ಸಾಹ ಮಾಡಬಹುದು. ಆದರೆ ಸಿಎಂ ಯಾವುದೋ ಒಂದು ಕಂಪೆನಿಗೆ ಫೇವರ್ ಆಗಲು ಹೊರಟಿದ್ದಾರೆ. ಈ ಮೂಲಕ ಸಿಎಂ ವ್ಯವಹಾರ ಕುದುರಿಸಿಕೊಳ್ಳಲು ಹೊರಟಿದ್ದಾರೆ. ಸಿಎಂ ನಿರ್ಧಾರ ಖಂಡಿಸಿ 3 ದಿನ ಧರಣಿ ಮಾಡುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.