BBMP ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ತೆರಿಗೆ ಹಣ ಪೋಲಾಗುತ್ತಿದೆ.. ಕೊವಿಡ್ ನಿಯಂತ್ರಣಕ್ಕೆ ಅಂತಾ ಖರೀದಿಸಿದ್ದ ಯಂತ್ರಗಳು ತುಕ್ಕು ಹಿಡಿದು ನಿಂತಿವೆ.. ಕೊರೋನಾ ಸಂದರ್ಭದಲ್ಲಿ ಸೋಂಕು ನಿವಾರಕ ಔಷಧ ಸಿಂಪಡಣೆಗಾಗಿ ಯಂತ್ರಗಳನ್ನು ಖರೀದಿ ಮಾಡಲಾಗಿತ್ತು.. ಪಾಲಿಕೆ ಆವರಣದಲ್ಲಿ 8 ಮಿಸ್ಟ್ ಕೆನಾನ್ ಯಂತ್ರಗಳು ಕೆಟ್ಟು ನಿಂತಿವೆ.
ಒಂದು ಮಿಸ್ಟ್ ಕೆನಾನ್ ಯಂತ್ರಕ್ಕೆ 53 ಲಕ್ಷ ರೂ ಖರ್ಚಾಗಿದೆ. ಆದರೆ ಅವುಗಳ ನಿರ್ವಹಣೆ ಮಾಡದೇ ಜನರ ತೆರಿಗೆ ಹಣ ಪೋಲು ಮಾಡಲಾಗ್ತಿದೆ.. ಕಳೆದ ಒಂದುವರೆ ವರ್ಷದಿಂದ ಮಿಸ್ಟ್ ಕೆನಾನ್ ಯಂತ್ರಗಳು ಪಾಳು ಬಿದ್ದಿವೆ.. ವಾಹನಗಳನ್ನು ರಿಪೇರಿ ಮಾಡಿಸದೇ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ..