ಪ್ರಾದೇಶಿಕ ರಾಜ್ಯಗಳಿ ಭಾಷೆವಾರು ಆದಾಗ, ಸಹಜವಾಗಿ ವ್ಯತ್ಯಾಸಗಳು ಬಂದೇ ಬರುತ್ತವೆ. ನಿಖರವಾದ ರೇಖೆಯನ್ನು ಯಾವುದೇ ರಾಜ್ಯ ಅಥವಾ ದೇಶದ ನಡುವೆ ಎಳೆಯಲು ಸಾಧ್ಯವಿಲ್ಲ.
ಆದ ಕಾಲಕಳೆದಂತೆ, ವ್ಯತ್ಯಾಸಗಳನ್ನು ಮರೆತು ಸಾಮರಸ್ಯದಿಂದ ಬದುಕುವುದು ಬಹಳ ಮುಖ್ಯ. ಆದರೆ ಈ ರೀತಿ ಆಗಲಿಲ್ಲ ಎಂಬ ಕೊರಗು ಕನ್ನಡಿಗರಿಗಿದೆ. ಗಡಿ ಭಾಗದಲ್ಲಿ ಯಾವುದೇ ಭಾಷೆ ಮಾತನಾಡಿದರು ನೆಮ್ಮದಿಯಿಂದ ಜೀವನ ನಡೆಸುತ್ತಾರೆ.
ನಾನು ಬೆಳಗಾವಿ ಅಧಿವೇಶನಕ್ಕೆ ಹೋದಾಗ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ಪ್ರೀತಿಯಿಂದ ಮಾತನಾಡುತ್ತಾರೆ. ಜನರ ಮಧ್ಯೆ ಇಲ್ಲದಿರುವ ಸಮಸ್ಯೆಗಳನ್ನು ಬೆಳೆಸಿಕೊಂಡು ಹೋಗುವುದು ರಾಜ್ಯಕ್ಕಾಗಲಿ, ದೇಶಕ್ಕಾಗಲಿ ಒಳಿತನ್ನು ತರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.