ಇತ್ತೀಚೆಗಂತು ಅತಿ ಹೆಚ್ಚು ರೈಲು ಅಪಘಾತ ಪ್ರಕರಣಗಳು ನಡೀತಿವೆ.. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂಜಿನ್ ಇಲ್ಲದೇ ರೈಲು ಬೋಗಿಗಳು ಚಲಿಸಿದ್ದು, ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದ್ದಾರೆ..ರೈಲಿನ ಇಂಜಿನ್ ಹಾಗೂ ಬೋಗಿಗಳನ್ನು ಜೋಡಿಸಿಲಾಗುತ್ತದೆ.. ಈ ಜೋಡಣೆಯಲ್ಲಿ ವ್ಯತ್ಯಾಸವಾದರೆ ಇಂಜಿನ್ ಹಾಗೂ ಬೋಗಿಗಳು ಬೇರ್ಪಟ್ಟು ಚಲಿಸಿ ಅಪಾಯವನ್ನುಂಟು ಮಾಡುತ್ತವೆ. ಜಾರ್ಖಾಂಡ್ನ ಸಾಹಿಬ್ಗಂಜ್ ರೈಲ್ವೆ ಕ್ರಾಸಿಂಗ್ ಬಳಿ ರೈಲು ಬೋಗಿಗಳು ಇಂಜಿನ್ನಿಂದ ಬೇರ್ಪಟ್ಟು ಚಲಿಸಿವೆ.. ಆದರೆ ಈ ಘಟನೆಯಿಂದಾಗಿ ಯಾವುದೇ ಸಾವು-ನೋವು ಸಂಭವಿಸಿಲ್ಲ.. ಈ ವಿಡಿಯೋ ನೋಡಿದ್ರೆ ರೈಲ್ವೆ ಇಲಾಖೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದಿಲ್ಲವೇ ಎಂಬ ಅನುಮಾನ ಹುಟ್ಟು ಹಾಕುತ್ತದೆ.