ಕಾರವಾರದ ಕೂರ್ಮಗಡ ಬಳಿ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವಿವರ ನೀಡಿದ್ದಾರೆ.
ದುರಂತಕ್ಕೆ ಈಡಾಗಿರುವ ಬೋಟ್ ನಲ್ಲಿ 35 ಜನರು ಇದ್ದರು. 19 ಜನರನ್ನು ರಕ್ಷಿಸಲಾಗಿದೆ. 16 ಜನರು ನೀರು ಪಾಲಾಗಿದ್ದರು. 14 ಶವಗಳು ಈಗಾಗಲೇ ದೊರಕಿವೆ. 2 ಶವಗಳಿಗಾಗಿ ಹುಡುಕಾಟ ನಡೆದಿದೆ. ಹೀಗಂತ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ಮುಂದುವರಿಯಲಿದೆ ಎಂದ ಅವರು, ನೀರು ಪಾಲಾದವರು 13 ಜನರು ಒಂದೇ ಕುಟುಂಬದವರು. ಸಂದೀಪ ಮತ್ತು ಕೀರ್ತಿ ಇಬ್ಬರ ಶವ ಪತ್ತೆಯಾಗಬೇಕು ಎಂದರು.
ಬೋಟ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಯಾನಂದ ರಾಮ ಜಾಧವ್, ರಘುನಾಥ್ ಯಶವಂತ ಚೋಪಡೆಕರ್ ಬಂಧಿತರಾಗಿದ್ದಾರೆ. ಚಿತ್ತಾಕುಲ ಪೊಲೀಸ್ ರ ವಶದಲ್ಲಿ ಬಂಧಿತರಿದ್ದಾರೆ ಎಂದರು.