Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಸ್ವಯಂವರದ ಮೂಲಕ ರಿತೇಶ್ ಎಂಬಾತನನ್ನು ವರಿಸಿದ್ದ ರಾಕಿ ಸಾವಂತ್ ಬಳಿಕ ದೂರವಾಗಿದ್ರು..ಆನಂತರ ತಮಗೆ ಮತ್ತೊಬ್ಬರೊಂದಿಗೆ ವಿವಾಹವಾಗಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ರಾಖಿ ಸಾವಂತ್ ಆತನನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ರು..ಆದ್ರೆ, ಇದು ಸುಳ್ಳು ಸುದ್ದಿ ಎಂಬುದು ಬಳಿಕ ಬಹಿರಂಗವಾಗಿತ್ತು. ಇದೀಗ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ರಾಖಿ ಸಾವಂತ್ ತಮಗೆ ಹೊಸ ಪ್ರೇಮಿ ಸಿಕ್ಕಿರುವುದಾಗಿ ಹೇಳಿಕೊಂಡಿದ್ದಾರೆ.. ಮೈಸೂರಿನ ಆದಿಲ್ ಎಂಬುವವರು ತನಗೆ ಬಿಎಂಡಬ್ಲ್ಯೂ ಕಾರ್ ನೀಡಿ ಪ್ರಪೋಸ್ ಮಾಡಿದ್ದಾರೆ ಎಂದು ರಾಖಿ ಸಾವಂತ್ ತಿಳಿಸಿದ್ದಾರೆ.