Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮದುವೆ ಆಗುತ್ತೇನೆ ಎಂದು ನಂಬಿಸಿ 2 ಲಕ್ಷ ರೂ. ಪಡೆದಿದ್ದ ಬಿಎಂಟಿಸಿ ಚಾಲಕ, ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸುಮ್ಮನಹಳ್ಳಿ ಡಿಪೋ ನಲ್ಲಿ ಬಿಎಂಟಿಸಿ ಚಾಲಕ ವಿಶ್ವನಾಥ್ ಎಂಬಾತ ತಿಪಟೂರಿನ ತೋಟದ ಮನೆಗೆ ಕರೆದೊಯ್ದು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ.
ಕಳೆದ ಮೂರು ವರ್ಷಗಳಿಂದ ವಿಶ್ವನಾಥ್ ಹಾಗೂ ಮಹಿಳೆಯ ನಡುವೆ ಸ್ನೇಹ ಬೆಳದಿತ್ತು. ಪರಸ್ಪರ ಇಬ್ಬರು ಕೂಡ ಅಗಾಗ ಭೇಟಿಯಾಗುತ್ತಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಮಹಿಳೆಯಿಂದ ಸುಮಾರು 2 ಲಕ್ಷ ಹಣವನ್ನು ವಿಶ್ವನಾಥ್ ಗೆ ನೀಡಿದ್ದ ಮಹಿಳೆ ವಾಪಾಸ್ ಕೇಳುತ್ತಿದ್ದಳು.
ಹಣವನ್ನು ವಾಪಾಸ್ ಕೇಳಿದಕ್ಕೆ ಮಹಿಳೆಯನ್ನು ತಿಪಟೂರಿಗೆ ಕರೆದುಕೊಂಡು ಹೋಗಿ ವಿಶ್ವನಾಥ್ ಹಲ್ಲೆ ನಡೆಸಿದ್ದಾನೆ. ಕಲವು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯನ್ನು ಮದುವೆಯಾಗುತ್ತೇನೆ ಎಂದು ವಿಶ್ವನಾಥ್ ನಂಬಿಸಿದ್ದ. ಬಿಎಂಟಿಸಿ ಡ್ರೈವರ್ ಗೆ ಮದುವೆಯಾಗಿ ಮಗು ಕೂಡ ಇದೆ.