Publish Date: Tue, 27 Aug 2019 (16:11 IST)
Updated Date: Tue, 27 Aug 2019 (16:13 IST)
ಬ್ಲೂ ಫಿಲಂ ನೋಡಿದವರನ್ನು ಬಿಜೆಪಿಯವರು ಡಿಸಿಎಂ ಮಾಡಿದ್ದಾರೆ. ಅದೂ ಸದನಲ್ಲಿ ನೋಡಿದಂತವರನ್ನ ಉಪ ಮುಖ್ಯಮಂತ್ರಿ ಮಾಡಿದೆ ಅಂತ ಲಕ್ಷ್ಮಣ ಸವದಿಗೆ ಮಾಜಿ ಸಿಎಂ ಟಾಂಗ್ ನೀಡಿದ್ದಾರೆ.
ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದಕ್ತಾರಾ? ಹಾಗಾಗಿದೆ ಬಿಜೆಪಿ ಸರ್ಕಾರದ ಸ್ಥಿತಿಯಾಗಿದೆ. ಹೀಗಂತ ಅಥಣಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಬಿಜೆಪಿಯವರಿಗೆ ಮಾನ ಮರ್ಯಾದೆನೇ ಇಲ್ಲ ಅಂತ ಟೀಕೆ ಮಾಡಿದ್ರು.
ಇನ್ನು, ಉಮೇಶ ಕತ್ತಿ ಅವರು ನನಗೆ ಕರೆ ಮಾಡಿದ್ರು, ನಾನು ಅವರಿಗೆ ಕರೆ ಮಾಡಿಲ್ಲ. ಕಣ್ಣು ಆಪರೇಶನ್ ಆಗಿದ್ದ ಬಗ್ಗೆ ಕರೆ ಮಾಡಿದ್ರು. ಬಾರಪ್ಪ ಮಾತಾಡೋಣ ಅಂದಿದ್ದೆ, ಆದ್ರೆ ಬರಲಿಲ್ಲ ಎಂದ್ರು.
ಅನರ್ಹ ಶಾಸಕರಿಗೂ ನಾವು ಪಾಠ ಕಲಿಸುತ್ತೇವೆ, ಶ್ರೀಮಂತ ಪಾಟೀಲ ಗೂ ಕೂಡ ಪಾಠ ಕಲಿಸ್ತೇವೆ ಅಂತ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ರು.
ಡಿಕೆ ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಒಡಕಿಲ್ಲ. ನನಗೆ ಎಲ್ಲರೂ ವಿಶ್ವಾಸಿಗಳೇ ಇದ್ದಾರೆ ಅಂತ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಹೇಳಿಕೆ ನೀಡಿದ್ದಾರೆ.