Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹುಬ್ಬಳ್ಳಿ : ತನ್ನ ಜೊತೆ ಮದುವೆ ಆಗದಿದ್ದರೆ ಜೊತೆಗೆ ತೆಗೆಸಿಕೊಂಡಿರುವ ಎಲ್ಲ ಫೋಟೋಗಳನ್ನು ಎಲ್ಲರಿಗೂ ಕಳುಹಿಸುತ್ತೇನೆ.
ಹೀಗೆಂದು ಯುವತಿಯೊಬ್ಬಳಿಗೆ ಬ್ಲ್ಯಾಕ್ಮೇಲ್ ಮಾಡುತ್ತಿರುವ ಕುರಿತು ಯುವತಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ರಾಯಚೂರು ಮೂಲದ ಆನಂದಕುಮಾರ ಭೋವಿ ಯುವತಿಗೆ ವಂಚಿಸಿದ ಆರೋಪಿಯಾಗಿದ್ದಾನೆ.
ಈತ ಮೊದಲೇ ಮದುವೆಯಾಗಿದ್ದ ವಿಷಯ ಮುಚ್ಚಿಟ್ಟು, ಹತ್ತು ತಿಂಗಳ ಹಿಂದೆ ನಗರದ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಪ್ರೀತಿಸಿದ್ದ. ಈತನ ಮದುವೆ ವಿಷಯ ಗೊತ್ತಾದ ಬಳಿಕ ಯುವತಿ ಈತನಿಂದ ದೂರವಾಗಿದ್ದಳು.
ಆನಂದ ಯುವತಿಯನ್ನು ಹಿಂಬಾಲಿಸುವುದು, ಆಕೆಯ ಜೊತೆಗಿನ ಫೋಟೋಗಳನ್ನು ಸಂಬಂಧಿಕರಿಗೆ ಕಳುಹಿಸುವುದು ಇತ್ಯಾದಿ ಕಿರಿಕಿರಿ ಮಾಡುತ್ತಾ ಯುವತಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ನವಂಬರ್ 14 ರಂದು ವೀರಾಪುರ ಓಣಿಯಲ್ಲಿ ತನ್ನನ್ನು ಹಿಂಬಾಲಿಸಿಕೊಂಡು ಬಂದು ಅಡ್ಡ ಹಾಕಿ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಯುವತಿ ದೂರಿ ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.