Publish Date: Fri, 21 Apr 2023 (14:59 IST)
Updated Date: Fri, 21 Apr 2023 (15:40 IST)
ಸಚಿವ ಆರ್. ಅಶೋಕ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಗತಿ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಬಂದಿಲ್ಲವೆಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮಗೆ ದ್ವೇಷದ ರಾಜಕಾರಣ ಅಗತ್ಯ ಇಲ್ಲ ಎಂದು ತಿಳಿಸಿದ್ರು. ಅಧಿಕಾರಿಗಳು ಸರ್ಕಾರದ ಸೂಚನೆ ಪಾಲಿಸ್ತಾರೆ, ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಮುಗಿದ ಮೇಲೆ ಚುನಾವಣಾ ದಿನಾಂಕವನ್ನ ಘೋಷಣೆ ಮಾಡ್ತಾರೆ ಅಂದರೆ ಇದನ್ನ ನೀವೆ ಅರ್ಥ ಮಾಡಿಕೊಳ್ಳಿ.. ಅಧಿಕಾರಿಗಳು ಸರ್ಕಾರದ ಸೂಚನೆ ಪಾಲಿಸ್ತಾರೆ ಎಂಬುದಕ್ಕೆ ಇದೇ ನಿದರ್ಶನ ಎಂದು ಕಿಡಿಕಾರಿದ್ದಾರೆ.