ಸಿಎಂ ಕುರ್ಚಿಗೆ ಡಿಕೆ ಶಿವಕುಮಾರ್ ಗೆ ಅಡ್ಡಿಯಾಗ್ತಿರೋರು ಯಾರು ಎಂದ ಬಿಜೆಪಿ

Krishnaveni K
ಗುರುವಾರ, 3 ಜುಲೈ 2025 (16:19 IST)
ಬೆಂಗಳೂರು: ಸಿಎಂ ಆಗಬೇಕೆಂಬ ಕನಸು ಹೊತ್ತಿರುವ ಡಿಕೆ ಶಿವಕುಮಾರ್ ಗೆ ಅಡ್ಡಿಯಾಗುತ್ತಿರುವವರು ಯಾರು ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದೆ.
 

ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಬೆಂಬಲಿಗರ ಮೂಲಕ 'ಸೆಪ್ಟೆಂಬರ್ ಬಳಿಕದ ಸಿಎಂ' ಎಂದು ಕುರ್ಚಿಗೆ ಎಷ್ಟೇ ಟವೆಲ್ ಹಾಕಿದರೂ, ಸಿದ್ದರಾಮಯ್ಯ ಬಣದ ತಂತ್ರದ ಮುಂದೆ ಬಂಡೆ ಜಾರಿ ಉರುಳಿದೆ. ಹೈಕಮಾಂಡ್ ಬೆಂಬಲ ಪಡೆದು ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಘೋಷಿಸಿದ್ದಾರೆ.

ಸಿದ್ದರಾಮಯ್ಯ ಅವರ ರಾಜಕೀಯ ಹೊಡೆತ ತಾಳಲಾರದೇ ಅಸಹಾಯಕತೆಯ ಮಾತನ್ನು ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಸಿದ್ದರಾಮಯ್ಯರನ್ನು ತಲೆಯಲ್ಲಿ ಹೊತ್ತು ತಿರುಗಾಡುತ್ತಿರುವ ಜಮೀರ್, ಮಹದೇವಪ್ಪ ಮುಂತಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯವೂ ಡಿಕೆಶಿಗೆ ಬರುತ್ತಿಲ್ಲ.

ಒಟ್ಟಿನಲ್ಲಿ ಸಿಎಂ ಕುರ್ಚಿಯ ಸಲುವಾಗಿ ನಡೆಯುತ್ತಿರುವ ಕಾಂಗ್ರೆಸ್ ನಾಯಕರೊಳಗಿನ ಫೈಟ್‌ನಿಂದ ಸಚಿವರುಗಳು, ಶಾಸಕರು ಹಾದಿ ಬೀದಿಯಲ್ಲಿ ಕಿತ್ತಾಡುತ್ತಿದ್ದು ರಾಜ್ಯದ ಆಡಳಿತ ಮಾತ್ರ ಮೂರಾಬಟ್ಟೆಯಾಗಿದೆ ಎಂದು ಬಿಜೆಪಿ ವ್ಯಂಗ್ಯ ಮಾಡಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿವಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಧ್ಯರಸ್ತೆಯಲ್ಲೇ ಕಾರನ್ನು ತಡೆದು ಹಿಗ್ಗಾಮುಗ್ಗಾ ಹೊಡೆದ ಯುವಕರ ಗುಂಪು ಭಯಾನಕ ವಿಡಿಯೋ

ಜೀವನ ಸಾಕಾಗಿದೆ: ಸ್ಯಾಂಕಿ ಕೆರೆಗೆ ಹಾರಿ ಯುವತಿ ಸಾವಿಗೆ ಶರಣು

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ 116 ವರ್ಷದ ವೃದ್ಧೆಗೆ ವಿಐಪಿ ದರ್ಶನ

Maharashtra Rain: ಮಹಾರಾಷ್ಟ್ರದಲ್ಲಿ ಭಾರೀ ಮಳೆ, ಇಂದು ಕೂಡಾ ರೆಡ್ ಅಲರ್ಟ್ ಘೋಷಣೆ

ಬಾವನ ಜೊತೆ ಪರಾರಿ ಆಗಿದ್ದ ಪತ್ನಿ 17 ವರ್ಷದ ನಂತರ ಗಂಡನ ಮೇಲೆ ಕೇಸ್ ಹಾಕಿದ್ಳು: ಜಡ್ಜ್ ನೀಡಿದ ಉತ್ತರ ವೈರಲ್ Video

ಮುಂದಿನ ಸುದ್ದಿ
Show comments