Publish Date: Fri, 19 Oct 2018 (10:41 IST)
Updated Date: Fri, 19 Oct 2018 (10:43 IST)
ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕೈ ಹಾಕಿ ತಮ್ಮ ಹಿಂದಿನ ಸರ್ಕಾರ ತಪ್ಪು ಮಾಡಿದೆ ಎಂಬು ಬಹಿರಂಗವಾಗಿ ಸಚಿವ ಡಿಕೆ ಶಿವಕುಮಾರ್ ಕ್ಷಮೆ ಯಾಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಘಟಕ ವ್ಯಂಗ್ಯ ಮಾಡಿದೆ.
‘ಕಾಂಗ್ರೆಸ್ ನದ್ದು ಯಾವತ್ತೂ ವಿಭಜಿಸಿ ಆಳುವ ನೀತಿ. ಹಿಂದೂ ಸಮುದಾಯವನ್ನು ಒಡೆಯುವುದು ಕಾಂಗ್ರೆಸ್ ನ ನೀತಿ ಮತ್ತು ಸಿದ್ದರಾಮಯ್ಯ ಗಾಂಧಿ ಕುಟುಂಬಕ್ಕೋಸ್ಕರ ಈ ರೀತಿ ಮಾಡಿದ ಮತ್ತೊಬ್ಬ ಏಜೆಂಟ್. ಲಿಂಗಾಯತರನ್ನು ಹಿಂದೂಗಳಿಂದ ಬೇರ್ಪಡಿಸಿ ಧರ್ಮ ಒಡೆಯುವ ಕೆಲಸ ಮಾಡಿದ್ದನ್ನು ಕಾಂಗ್ರೆಸ್ ನ ಶಾಸಕರೇ ಒಪ್ಪಿಕೊಂಡಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಂಭಾಪುರಿ ಶ್ರೀಗಳ ಧರ್ಮಸಮ್ಮೇಳನದಲ್ಲಿ ಸಚಿವ ಡಿಕೆಶಿ ತಮ್ಮ ಹಿಂದಿನ ಸರ್ಕಾರ ಧರ್ಮದ ವಿಚಾರದಲ್ಲಿ ಮೂಗು ತೂರಿಸಿ ತಕ್ಕ ಪಾಠ ಕಲಿಯಿತು ಎಂದು ತಪ್ಪೊಪ್ಪಿಕೊಂಡಿದ್ದರು. ಅಲ್ಲದೆ, ತಮ್ಮ ಸರ್ಕಾರದ ತಪ್ಪಿಗೆ ಕ್ಷಮೆಯನ್ನೂ ಯಾಚಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.