Publish Date: Fri, 09 Oct 2020 (16:35 IST)
Updated Date: Fri, 09 Oct 2020 (16:37 IST)
ಇವತ್ತು ಮೊದಲು ಜೀವ ಉಳಿಸೋಣ, ಆ ಮೇಲೆ ಜೀವನ ಮಾಡೋಣ ಎಂದು ಬಿಜೆಪಿ ಸಂಸದೆಯೊಬ್ಬರು ಹೇಳಿದ್ದಾರೆ.
ಈ ವರ್ಷವನ್ನ ಪರೀಕ್ಷೆ ಇಲ್ಲದ ವರ್ಷವೆಂದು ಘೋಷಿಸಬೇಕು. 2020 ಜೀವ ಉಳಿಸುವ ವರ್ಷವಾಗಿದೆ.
ಮೊದಲು ಜೀವ ಉಳಿಸೋಣ, ಆಮೇಲೆ ಜೀವನ ಮಾಡೋಣವೆಂದು ಪ್ರಧಾನಿ ಮೋದಿ ಹೇಳಿದ್ದರು ಎಂದು ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಆನ್ ಲೈನ್ ಕ್ಲಾಸ್ ಮುಂದುವರೆಸುವಂತೆಯೂ ಮನವಿ ಮಾಡಿರುವ ಅವರು, ಯಾವುದೇ ಕಾರಣಕ್ಕೆ ಶಾಲೆ ಆರಂಭ ಬೇಡ ಎಂದಿದ್ದಾರೆ.
ರಾಜ್ಯ ಸೇರಿ ದೇಶಾದ್ಯಂತ ಶಿಕ್ಷಕರ ಸಾವು ಸಂಭವಿಸಿವೆ. ಶಿಕ್ಷಕರು ದೇಶದ ಆಸ್ತಿ, ಪೋಷಕರು ಮಕ್ಕಳನ್ನ ಶಾಲೆಗೆ ಕಳಿಸುವ ಸ್ಥಿತಿಯಲ್ಲಿಲ್ಲ. ಮಕ್ಕಳನ್ನ ಖಾಯಿಲೆ ಅಥವಾ ಸಮಸ್ಯೆಗೆ ದೂಡುವ ಮಾನಸಿಕತೆಯಲ್ಲಿಲ್ಲ. ಶಿಕ್ಷಕರ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಬೇಕು ಎಂದಿದ್ದಾರೆ.