ಕರಡು ಮತಪಟ್ಟಿ ಪರಿಶೀಲಿಸಿ ಆಕ್ಷೇಪಣೆ ಸಲ್ಲಿಕೆ, ದಿನಾಂಕ ವಿಸ್ತರಿಸಲು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ

Krishnaveni K
ಬುಧವಾರ, 18 ಮಾರ್ಚ್ 2026 (19:24 IST)
ಬೆಂಗಳೂರು: ಜಿ.ಬಿ.ಎ ಚುನಾವಣೆಯ ಕರಡು ಮತಪಟ್ಟಿಯ ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲು ಬಿಜೆಪಿ ನಿಯೋಗವು ಇಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಮತದಾರರ ಪಟ್ಟಿಯ ಪರಿಶೀಲನೆಯ ವೆಬ್ ಸೈಟ್ ದಿನಾಂಕ 13.03.2026 ರಿಂದ ದಿನಾಂಕ 18.03.2026ರ ತನಕ ತಾಂತ್ರಿಕ ಕಾರಣಗಳಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈ ಕುರಿತು ಜಿಬಿಎ ಮಹಾ ಆಯುಕ್ತರಿಗೆ ಬಿಜೆಪಿಯ ನಿಯೋಗ ಅಧಿಕೃತವಾಗಿ ಇದರ ಬಗ್ಗೆ ದೂರು ಸಲ್ಲಿಸಿದೆ. ಇದರ ನಕಲು ಪ್ರತಿಯನ್ನು ಲಗತ್ತಿಸಲಾಗಿದೆ. ಜಿಬಿಎ ವೆಬ್ ಸೈಟ್ ಕಳೆದ ಆರು ದಿನ ಕಾರ್ಯ ನಿರ್ವಹಿಸದೇ ಇದ್ದ ಕಾರಣ ನಾಗರಿಕರಿಗೆ ತೀವ್ರ ತೊಂದರೆಯಾಗಿದೆ ಹಾಗೂ ಪರಿಶೀಲಿಸಲು ಸಾಧ್ಯವಾಗದೆ ಪರದಾಡಿದರು ಎಂದು ಮನವಿ ಗಮನ ಸೆಳೆದಿದೆ.
 
ಕರಡು ಮತದಾರರ ಪಟ್ಟಿಯು ದಿನಾಂಕ 16.03.2026ರಂದು ನಮ್ಮ ಕಚೇರಿಗೆ ತಲುಪಿದ್ದು, ಈ ಪಟ್ಟಿಯನ್ನು ಪರಿಶೀಲಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಮುಂದಿನ ಮೂರು ದಿನಗಳ ಕಾಲ ಹಬ್ಬದ ಪ್ರಯುಕ್ತ ರಜಾ ಇದೆ. ಈ ಸಂದರ್ಭದಲ್ಲಿ ಸಾವಿರಾರು ಜನರು ತಮ್ಮ ಊರುಗಳಿಗೆ ತೆರಳುವುದರಿಂದ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಕರಡು ಪ್ರತಿಯ ಬಗ್ಗೆ ಆಕ್ಷೇಪಣೆ ಸಲ್ಲಿಸುವ ದಿನಾಂಕವನ್ನು 20.03.2026 ರಿಂದ 30.03.2026ರವರೆಗೆ ವಿಸ್ತರಿಸಿ, ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು. ನಗರದ ಮತದಾರರ ಹಿತದೃಷ್ಟಿಯಿಂದ ನಮ್ಮ ಮನವಿಯನ್ನು ಪುರಸ್ಕರಿಸಿ, ಮತದಾರರ ಹಕ್ಕು ಕಾಪಾಡಬೇಕು ಎಂದು ಒತ್ತಾಯಿಸಲಾಯಿತು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಯಮುನಾ ನದಿ ತೀರದಲ್ಲಿ ದೈತ್ಯ ಜಿರಳೆಗಳ ದಂಡು ಕಂಡು ದಂಗಾದ ಜನ

ಓಡು ಓಡಲೇ... ಪೆಟ್ರೋಲ್ ಗಾಗಿ ಕ್ಯಾನ್ ಹಿಡ್ಕೊಂಡು ಓಡಿದ ಜನ ಸಾಗರ Video

ಕಾಕ್ರೋಚ್ ಜನತಾ ಪಾರ್ಟಿ ಮುಂದೆ ಚುನಾವಣೆಗೆ ಸ್ಪರ್ಧಿಸುತ್ತದೆಯೇ: ಕುತೂಹಲಕಾರಿ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಅಳುತ್ತಿರುವ ಮಗುವನ್ನು ಕಾಳಿ ಮಾತೆಯ ಮಡಿಲಲ್ಲಿ ಮಲಗಿಸಿದಾಗ ಸುಮ್ಮನಾಯಿತು: ಸೆನ್ಸೇಷನಲ್ Video

ಮುಂದಿನ ಸುದ್ದಿ
Show comments