ರಾಜ್ಯದ ಜನತೆಯ ಸಾಮರಸ್ಯ ಕೆಡಿಸಲು ಬಿಜೆಪಿ ಮಂಗಳೂರು ಚಲೋ ಸಂಚು ರೂಪಿಸಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಜನತೆಗೆ ಹೇಳಿಕೊಳ್ಳುವುಂತಹ ಯಾವುದೇ ಜನಪರ ಕಾರ್ಯಗಳಾಗಲಿ ಅಥವಾ ಕೇಂದ್ರದ ಮೋದಿ ಸರಕಾರದ ಸಾಧನೆಗಳು ಹೇಳಿಕೊಳ್ಳಲು ಇಲ್ಲದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯದ ಜನತೆಯ ಸಾಮರಸ್ಯ ಕೆಡಿಸಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಜನತೆಯ ಮುಂದೆ ಹೋಗಲು ಯಾವುದೇ ವಿಷಯಗಳಿಲ್ಲವಾದ್ದರಿಂದ ಕೋಮುಭಾವನೆಗಳನ್ನು ಕೆರಳಿಸಿ ಮತಪಡೆಯುವ ರಣತಂತ್ರ ರೂಪಿಸುತ್ತಿದೆ ಎಂದು ಹೇಳಿದ್ದಾರೆ.
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇದೀಗ ಶಾಂತಿ ನೆಲೆಸಿದೆ. ಬಿಜೆಪಿಯ ಮಂಗಳೂರು ಚಲೋ ಕಾರ್ಯಕ್ರಮದಿಂದ ಸಾಮರಸ್ಯ ಕೆಡುವ ಸಾಧ್ಯತೆಗಳಿರುವುದರಿಂದ ಸರಕಾರ ವಿರೋಧಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.