ನವದೆಹಲಿ : ಸಕ್ಕರೆ ಕಾಯಿಲೆ ಮತ್ತು ಬೊಜ್ಜು ಸಮಸ್ಯೆಯಿಂದ ದೂರ ಉಳಿಯಲು ಪ್ರತಿನಿತ್ಯ ಸಂಸ್ಕೃತ ಮಾತನಾಡಿ ಎಂದು ಹೇಳುವುದರ ಮೂಲಕ ಬಿಜೆಪಿ ಸಂಸದರೊಬ್ಬರು ಟೀಕೆಗೆ ಗುರಿಯಾಗಿದ್ದಾರೆ.
ಬಿಜೆಪಿ ಸಂಸದ ಗಣೇಶ್ ಸಿಂಗ್ ಅವರು ಸಂಸ್ಕೃತಕ್ಕೆ ಸಂಬಂಧಿಸಿದ ಸಂವಾದದಲ್ಲಿ ಭಾಗವಹಿಸಿದ್ದು, ಈ ವೇಳೆ ಮಾತನಾಡುವಾಗ ಈ ರೀತಿಯಾಗಿ ಹೇಳಿದ್ದು, ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ನಿತ್ಯ ಸಂಸ್ಕೃತ ಮಾತನಾಡುವುದರಿಂದ ನರ ವ್ಯವಸ್ಥೆಗೆ ಹೊಸ ಚೈತನ್ಯ ಸಿಗುತ್ತದೆ. ಇದರಿಂದ ಸಕ್ಕರೆ ಕಾಯಿಲೆ ಮತ್ತು ಬೊಜ್ಜು ದೂರ ಉಳಿಯುತ್ತದೆ ಎಂಬುದು ಅಮೇರಿಕದವರು ನಡೆಸಿದ ಅಧ್ಯಯನದಿಂದ ಬಯಲಾಗಿದೆ. ಹೀಗೆ ಮಾಡುವುದರಿಂದ ನೀವು ಆರೋಗ್ಯವಾಗಿರಬಹುದು ಎಂದು ಹೇಳಿದ್ದಾರೆ.