Publish Date: Tue, 22 May 2018 (16:00 IST)
Updated Date: Tue, 22 May 2018 (16:01 IST)
ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಶಾಸಕರಾಗಿ ಅಯ್ಕೆಯಾಗಿರುವ ಬಿಜೆಪಿಯ ರಘುಪತಿ ಭಟ್ ವಿಜಯೋತ್ಸವನ್ನು ಅಚರಿಸಲು ಸಿದ್ದರಾಗಿದ್ದಾರೆ.
ಈ ಬಗ್ಗೆ ಉಡುಪಿಯ ಕಡಿಯಾಳಿಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರಘುಪತಿ ಭಟ್ .ಇದು ನನ್ನ ಗೆಲುವಲ್ಲ,ಪಕ್ಷಕ್ಕಾಗಿ ರಾತ್ರಿ ಹಗಲು ಕಷ್ಟಪಟ್ಟ ಕಾರ್ಯಕರ್ತರ ಗೆಲುವು,ಹೀಗಾಗಿ ಕಾರ್ಯಕರ್ತರಿಗೆ ಕೃತಜ್ನತೆಯನ್ನ ಸೂಚಿಸುವ ಸಲುವಾಗಿ ಪರ್ಕಳದಿಂದ ವಿಜಯೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಗುತ್ತೆ.ನಂತರ ಮಣಿಪಾಲ ಮಾರ್ಗವಾಗಿ ಮಲ್ಪೆ - ಕದಿಕೆ - ಸಂತಕಟ್ಟೆ - ಅಂಬಾಗಿಲು ಮಾರ್ಗವಾಗಿ ,ಚಿತ್ತರಂಜನ್ ಸರ್ಕಲ್ ನಲ್ಲಿ ಅಂತ್ಯಗೊಳ್ಳಲಿದೆ ಎಂದರು.
ಅಷ್ಟೇ ಅಲ್ಲದೇ..ನಂಬರ್ ವನ್ ಶಾಸಕರ ವಿರುದ್ದ ಅತ್ಯಧಿಕ ಮತಗಳ ಅಂತರದಿಂದ ಗೆದ್ದಿದ್ದೇವೆ,ಪ್ರತಿಬೂತ್ ನಲ್ಲೂ ಬಿಜೆಪಿ ಅತೀ ಹೆಚ್ಚಿ ಲೀಡ್ ಪಡಕೊಂಡಿದೆ ಎಂದರು.
ಅಭಿವೃದ್ದಿ ಹೆಸರಲ್ಲಿ ಸುಳ್ಳು ಪ್ರಚಾರ ಪುಸ್ತಕಗಳನ್ನ ಹಂಚಿದ್ದು ಮಾಜಿ ಶಾಸಕರ ಸಾಧನೆಯಾಗಿದ್ದು ಜನ ಇದಕ್ಕೆ ಉತ್ತರ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.