Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅಕ್ರಮ ನೇಮಕಾತಿ ವಿಚಾರದಲ್ಲಿ ಸಚಿವ ಅಶ್ವತ್ಥನಾರಾಯಣ ಅವರ ಹೆಸರನ್ನು ಅವರ ಸಹೋದ್ಯೋಗಿಗಳೇ ಮಾಧ್ಯಮಗಳಿಗೆ ತೇಲಿಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಅಮಿತ್ ಶಾ ಭೇಟಿ ವೇಳೆ ಅಶ್ವತ್ಥನಾರಾಯಣ ಅವರ ಹೆಸರನ್ನು ಬೇಕಂತಲೇ ಎಳೆ ತಂದು, ಅವರ ತಲೆದಂಡಕ್ಕೆ ಒತ್ತಡ ಹೇರುವುದು ಬಿಜೆಪಿಯ ಕೆಲ ನಾಯಕರ ಉದ್ದೇಶವಾಗಿತ್ತು. ಹೀಗಾಗಿ ಮಾಧ್ಯಮಗಳಿಗೆ ಅವರೇ ಮಾಹಿತಿ ನೀಡಿದ್ದಾರೆ ಎಂದು ದೂರಿದರು.ಬಿಜೆಪಿ ವಿಚಾರದಲ್ಲಿ ನಾವೇನು ಮಾಡಬೇಕಿಲ್ಲ. ಅವರ ಮನೆಗೆ ಅವರೇ ಬೆಂಕಿ ಇಟ್ಟುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ದಾಖಲೆ ಮುಂದಿಡದೇ ಸುಮ್ಮನೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.