ಕುಡಚಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ ಗೆ ಬಂಧನ ಭೀತಿ ಎದುರಾಗಿದೆ.
2016 ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧ ಎದುರಾದ ಘಟನೆ ಇದಾಗಿದೆ. ಮಾಜಿ ಶಾಸಕ ಶಾಮ ಘಾಟಗೆ ಮನೆಗೆ ಹೋಗಿ ಧಮಕಿ ಹಾಕಿದ ಪ್ರಕರಣ ಹಿನ್ನೆಲೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕನ ವಿರುದ್ಧ ವಾರಂಟ ಜಾರಿಯಾಗಿದೆ.
ಶಾಸಕರ ಮೇಲೆ ಸಕ್ಕರೆ ಕಾರ್ಖಾನೆಗಳ ವಿರುದ್ಧ ಹಣ ಪಡೆದು ಪ್ರತಿಭಟನೆ ನಿಲ್ಲಿಸಿದ್ದಾರೆ ಎಂದು ಮಾಜಿ ಶಾಸಕ ಆರೋಪ ಮಾಡಿದ್ದಾರೆ.
ಶ್ಯಾಮ ಘಾಟಗೆ ಮನೆಗೆ ಹೋಗಿ ಅಭಿವೃದ್ಧಿ ವಿಷಯದಲ್ಲಿ ಬಹಿರಂಗ ಚರ್ಚೆ ಮಾಡುವಂತೆ ಶಾಸಕ ಪಿ ರಾಜೀವ ಹೇಳಿದ್ದರು.
ಈ ಸಂದರ್ಭದಲ್ಲಿ ವಾಗ್ವಾದ ನಡೆದು ಶಾಸಕ ಪಿ. ರಾಜೀವ ಸೇರಿದಂತೆ ಅವರ ಬೆಂಬಲಿಗರ ಮೇಲೆ ಪ್ರಕರಣವನ್ನು ಘಾಟಗೆ ಕುಟುಂಬದವರು ದಾಖಲಿಸಿದ್ದರು.
ಅವಾಚ್ಯ ಶಬ್ದಗಳಿಂದ ನಿಂದನೆ ಸೇರಿದಂತೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದ ಘಾಟಗೆ ಕುಟುಂಬದವರು.
ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ವಾರಂಟ ಜಾರಿ ಮಾಡಿರುವ ಬೆಂಗಳೂರಿನ ವಿಶೇಷ ನ್ಯಾಯಾಲಯದ ಆದೇಶದಿಂದಾಗಿ ಶಾಸಕನಿಗೆ ಬಂಧನ ಭೀತಿ ಶುರುವಾಗಿದೆ.