Publish Date: Fri, 23 Jun 2023 (15:17 IST)
Updated Date: Fri, 23 Jun 2023 (12:19 IST)
ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂಬ ಸ್ವಪಕ್ಷದ ನಾಯಕರ ಆರೋಪವನ್ನು ಸದಾನಂದಗೌಡ ಅಲ್ಲಗೆಳೆದಿದ್ದಾರೆ. ನಮ್ಮ ಪಕ್ಷದಲ್ಲಿ ಬಿಲ್ಕುಲ್ ಪೊಲಿಟಿಕಲ್ ಅಡ್ಜಸ್ಟ್ಮೆಂಟ್ ನಡೆದಿಲ್ಲ.
ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ರೆ ಖಂಡಿತ ನಾವು ಬಹುಮತ ಪಡೆಯುತ್ತಿದ್ದೆವು ಎಂದರು. ಗೆಲ್ಲುವ ನಿರೀಕ್ಷೆ ಇದ್ದ ಕಡೆಯು ಸಹ ನಾವು ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಮಯ, ಸಂದರ್ಭ ನೋಡಿ ಪೊಲಿಟಿಕಲ್ ಸ್ಟ್ರಾಟಜಿ ಮಾಡಬೇಕು.
ಅದನ್ನೆಲ್ಲಾ ಮಾಧ್ಯಮದವರ ಬಳಿ ಹೇಳಲು ಆಗಲ್ಲ. ಪೊಲಿಟಿಕಲ್ ಅಡ್ಜಸ್ಟ್ಮೆಂಟ್ ರಾಜಕಾರಣದಲ್ಲಿ ಇರಬಾರದು ಅಂತೇನೂ ಇಲ್ಲ. ಯಾವಾಗ ಅವಶ್ಯಕತೆ ಇದೆ, ಆಗ ಮಾಡಬೇಕು ಎಂದು ಅವರು ಹೇಳಿದರು.