Publish Date: Mon, 03 Apr 2023 (09:36 IST)
Updated Date: Mon, 03 Apr 2023 (10:37 IST)
ಉಡುಪಿ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಮುತಾಲಿಕ್ ನಡುವೆ ಮುಟ್ಟಾಳ ವಾರ್ ಶುರುವಾಗಿದೆ. ಚುನಾವಣೆ ಘೋಷಣೆಗೆ ಮುನ್ನ ಆರೋಪಗಳ ಸುರಿಮಳೆ ಮಾಡುತ್ತಿದ್ದ ಮುತಾಲಿಕ್ಗೆ ಬಿಜೆಪಿ ಉತ್ತರ ಕೊಟ್ಟಿರಲಿಲ್ಲ. ಇದೀಗ ಸುನಿಲ್ ಕುಮಾರ್ ಗೆ ಮತ ಹಾಕಿ ಮುಟ್ಟಾಳ ರಾಗಬೇಡಿ ಎಂಬ ಮುತಾಲಿಕ್ ಪೋಸ್ಟರ್ ವಿರುದ್ಧ ಕಮಲ ಪಡೆ ತಿರುಗಿಬಿದ್ದಿದೆ.
ಹೌದು. ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ರಾಜಕೀಯ ಪಕ್ಷಗಳ ನಾಯಕರ ಟಾಕ್ಫೈಟ್ ಜೋರಾಗಿದೆ. ಈ ಮಧ್ಯೆ ಕಾರ್ಕಳ ಅಖಾಡದಲ್ಲಿ ಪೋಸ್ಟರ್ ವಾರ್ ತಾರಕಕ್ಕೇರಿದೆ. ಕಾರ್ಕಳದಲ್ಲೀಗ ಪ್ರಮೋದ್ ಮುತಾಲಿಕ್ ಹಾಗೂ ಸಚಿವ ಸುನೀಲ್ ಕುಮಾರ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಾರ್ಕಳದ ಜನತೆ ಮತ್ತೊಮ್ಮೆ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸಿದ್ರೆ ನಿಮ್ಮಷ್ಟು ಮುಟ್ಟಾಳರು ಮತ್ತೊಬ್ಬರಿಲ್ಲ. ನೀವು ಮತ್ತೆ ಮುಟ್ಟಾಳರಾಗುವಿರಾ. ಹೀಗಂತಾ ಪ್ರಮೋದ್ ಮುತಾಲಿಕ್ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ಹಾಕುತ್ತಿದ್ದಂತೆ ಕಾರ್ಕಳದ ಬಿಜೆಪಿ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದಾರೆ. ನೂರಾರು ಜನ ಮುತಾಲಿಕ್ ಪೋಸ್ಟರ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.